Friday, April 25, 2025

Latest Posts

Recipe: ಮಾವಿನಕಾಯಿ ಚಿತ್ರಾನ್ನ ರೆಸಿಪಿ

- Advertisement -

Recipe: ಮಾವಿನ ಕಾಯಿ ಸೀಸನ್ ಆರಂಭವಾಗಿದೆ. ಎಲ್ಲಿ ನೋಡಿದರೂ ಮಾವಿನ ಕಾಯಿ ಉಪ್ಪಿನಕಾಯಿ, ಮಾವವಿನಕಾಯಿ ಚಟ್ನಿ, ತಂಬುಳಿ ಹೀಗೆ ವೆರೈಟಿ ವೆರೈಟಿ ಮಾವಿನ ಕಾಯಿ ಪದಾರ್ಥ ಕಾಣ ಸಿಗುತ್ತದೆ. ಅದೇ ರೀತಿ ನಾವಿಂದು ಮಾವಿನಕಾಯಿ ಚಿತ್ರಾನ್ನ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಇದನ್ನು ಈಸಿಯಾಗಿ ಮಾಡಿ ಮಕ್ಕಳಿಗೆ ಟಿಫಿನ್‌ಗೂ ಹಾಕಿಕೊಡಬಹುದು.

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಮಾವಿನ ತುರಿ, ಅರ್ಧ ಕಪ್ ತೆಂಗಿನ ತುರಿ, 2 ಈರುಳ್ಳಿ, 3 ಹಸಿಮೆಣಸು, ಕರಿಬೇವು, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಕಡಲೆಬೀಜ, ಅರಿಶಿನ, ಉಪ್ಪು, ಕೊತ್ತೊಂಬರಿ ಸೊಪ್ಪು, 4 ಸ್ಪೂನ್ ಎಣ್ಣೆ, ಅನ್ನ, ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ಅರ್ಧ ಕಪ್ ಮಾವಿನ ಕಾಯಿಯನ್ನು ತುರಿದುಕೊಳ್ಳಿ. ಅರ್ಧ ಕಪ್ ಕಾಯಿ ತುರಿ ಕೂಡ ಇರಲಿ. ಈಗ ಪ್ಯಾನ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು, ಕರಿಬೇವು, ಉದ್ದಿನಬೇಳೆ, ಕಡಲೆ ಬೇಳೆ, ಕಡಲೆ ಬೀಜ, ಗೇರುಬೀಜ ಹಾಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಉಪ್ಪು, ಅರಿಶಿನ ಮತ್ತು ತುರಿದ ಮಾವಿನ ಕಾಯಿ ಮಿಕ್ಸ್ ಮಾಡಿ ಹುರಿಯಿರಿ. ನಂತರ ಅನ್ನ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತೊಂಬರಿ ಸೊಪ್ಪು ಮತ್ತು ಕಾಯಿ ತುರಿ ಸೇರಿಸಿದ್ರೆ, ಮಾವಿನಕಾಯಿ ಚಿತ್ರಾನ್ನ ರೆಡಿ.

- Advertisement -

Latest Posts

Don't Miss