Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಅಂದ್ರೆ ಬರೀ ಬಿಸಿಲಲ್ಲ. ಅದು ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್. ವರ್ಷಕ್ಕೊಮ್ಮೆ ಮಾವಿನ ಹಣ್ಣನ್ನು ಸೇವಿಸುವ ಅವಕಾಶ ಸಿಗುವ ಸಮಯ. ಅಂಥಾದ್ರಲ್ಲಿ ನೀವು ಮಾವಿನ ಹಣ್ಣಿನ ಯಾವುದೇ ರೆಸಿಪಿಯನ್ನು ಮಿಸ್ ಮಾಡಿಕೊಳ್ಳಬಾರದು ಅಂತಾ ನಾವಿಂದು ಮಾವಿನ ಹಣ್ೞು- ಕಾಯಿ ಹಾಲು ಮತ್ತು ಚೀಯಾ ಸೀಡ್ಸ್ ಬಳಸಿ ಯಾವ ರೀತಿ ಪುಡ್ಡಿಂಗ್ ತಯಾರಿಸಬಹುದು ಅಂತಾ ಹೇಳಲಿದ್ದೇವೆ.
ಮೊದಲು ಮಿಕ್ಸಿ ಜಾರ್‌ಗೆ ಅರ್ಧ ಕಪ್ ಮಾವಿನ ಹಣ್ಣು, ಒಂದು ಕಪ್ ತೆಂಗಿನ ಹಾಲು, 1 ಸ್ಪೂನ್ ಜೇನುತುಪ್ಪ ಸೇರಿಸಿ ಬ್ಲೆಂಡ್ ಮಾಡಿ. ಒಂದು ಬೌಲ್‌ಗೆ ಹಾಕಿ, ಅದಕ್ಕೆ ನೆನೆಸಿಟ್ಟ ಚೀಯಾ ಸೀಡ್ಸ್ ಸೇರಿಸಿ, ಫ್ರಿಜ್‌ನಲ್ಲಿ ಚಿಲ್ ಮಾಡಲು ಇರಿಸಿ. ಬಳಿಕ ಗ್ಲಾಸ್‌ಗೆ ಹಾಕಿ, ಅದರ ಮೇಲೆ ಮಾವಿನ ಹಣ್ಣಿನ ಹೋಳುಗಳಿಂದ ಗಾರ್ನಿಶ್ ಮಾಡಿ, ಸವಿಯಲು ಕೊಡಿ.
ಮಾವಿನ ಹಣ್ಣು ಸೀಸನಲ್ ಫ್ರೂಟ್ ಆಗಿರುವ ಕಾರಣಕ್ಕೆ, ದಿನಕ್ಕೆ ಒಂದರಿಂದ ಎರಡರಂತೆ ನೀವು ಮಾವಿನ ಹಣ್ಣನ್ನು ಸವಿಯಬಹುದು. ಅಲ್ಲದೇ ಇದರಲ್ಲಿ ಬಳಸಿರುವ ತೆಂಗಿನ ಹಾಲು, ಜೇನುತುಪ್ಪ, ಚೀಯಾಸೀಡ್ಸ್ ಕೂಡ ಆರೋಗ್ಯಕ್ಕೆ ತುಂಬಾನೇ ಉತ್ತಮ.