Wednesday, December 4, 2024

Latest Posts

Recipe: ಉತ್ತರ ಭಾರತದ ಹೆಸರುಬೇಳೆ ಮಠರಿ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹೆಸರುಬೇಳೆ, 1 ಕಾಲು ರವಾ, 1 ಕಪ್ ಗೋಧಿ ಹಿಟ್ಟು,  ಕೊಂಚ ಎಳ್ಳು, ವೋಮ, ಜೀರಿಗೆ, ಇಂಗು, ಕಸೂರಿ ಮೇಥಿ, ಅರಿಶಿನ, ಚಾಟ್ ಮಸಾಲೆ, ಅರ್ಧ ಕಪ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆಯಬೇಕು. ಬಳಿಕ ನೀರಿನಲ್ಲಿ 2 ಗಂಟೆ ನೆನೆಸಿಡಬೇಕು. ಮತ್ತೆ ಅದನ್ನು ಸ್ವಚ್ಛವಾಗಿ ತೊಳೆಯಬೇಕು. ಬಳಿಕ ನೀರು ಹಾಕದೇ, ಮಿಕ್ಸಿ ಜಾರ್‌ಗೆ ಹಾಕಿ, ಇದನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು.

ಬಳಿಕ ಇದನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಇದರೊಂದಿಗೆ ರವಾ, ಎಳ್ಳು, ವೋಮ, ಜೀರಿಗೆ, ಇಂಗು, ಅರಿಶಿನ, ಕಸೂರಿ ಮೇಥಿ, ಚಾಟ್ ಮಸಾಲೆ, ಬೇಕಾದ್ರೆ ಸೋಡಾ ಬಳಸಬಹುದು, ಉಪ್ಪು, 2 ಚಮಚ ತುಪ್ಪ. ಇವಿಷ್ಟನ್ನು ಹಾಕಿ ಚೆನ್ನಾಗಿ ಹಿಟ್ಟು ಕಲಿಸಿ.

ಆದರೆ ಇದರೊಂದಿಗೆ ನೀವು ಯಾವುದೇ ಕಾರಣಕ್ಕೂ ನೀರು ಮಿಕ್ಸ್ ಮಾಡಬಾರದು. ಈ ಹಿಟ್ಟು ಗಟ್ಟಿಯಾಗಲು ನೀವು ಗೋಧಿ ಹಿಟ್ಟನ್ನು ಮಿಕ್ಸ್ ಮಾಡಬೇಕು. ಇನ್ನೊಂದೆಡೆ ಚಿಕ್ಕ ಬೌಲ್‌ನಲ್ಲಿ ತುಪ್ಪ ಮತ್ತು 1 ಸ್ಪೂನ್ ಗೋದಿ ಹಿಟ್ಟು ಹಾಕಿ ಮಿಕ್ಸ್ ಮಾಡಿ. ಒಂದು ಥಿಕ್ ಪೇಸ್ಟ್ ತಯಾರಿಸಿ.

ಈಗ ರೆಡಿ ಮಾಡಿಕೊಂಡ ಹಿಟ್ಟನ್ನು ನಾಡಿ, ಚಪಾತಿ ಮಾಡಿಕೊಳ್ಳಿ. ಬಳಿಕ ಚಪಾತಿ ಮೇಲೆ ಈ ತುಪ್ಪ ಮತ್ತು ಗೋಧಿ ಪೇಸ್ಟ್ ಕೊಂಚ ಹಾಕಿ ಸವರಿ. ಇದರ ಮೇಲೆ ಮತ್ತೆ ಗೋಧಿ ಹಿ್ಟನ್ನು ಉದುರಿಸಿ. ರೋಲ್ ಮಾಡಿ, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈ ಚಿಕ್ಕ ತುಂಡುಗಳನ್ನು ಚಟ್ಟೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಎಣ್ಣೆಯಲ್ಲಿ ಕರಿಯುವಾಗ ಎಣ್ಣೆ ಮದ ಉರಿಯಲ್ಲಿರಬೇಕು. ಏಕೆಂದರೆ, ಮಿಶ್ರಣದ ಒಳಗಡೆ ಕೂಡ ಚೆನ್ನಾಗಿ ಬೆಂದರೆ, ತಿಂಡಿ ಕ್ರಿಸ್ಪಿಯಾಗುತ್ತದೆ.

- Advertisement -

Latest Posts

Don't Miss