Thursday, January 9, 2025

Latest Posts

Recipe: ಪಾಲಕ್ ದಾಲ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಕಾಲು ಕಪ್ ತೊಗರಿ ಬೇಳೆ, ಅರ್ಧ ಕಪ್ ಕಡಲೆಬೇಳೆ, ಕಾಲು ಕಪ್ ಹೆಸರು ಬೇಳೆ, ಅರಿಶಿನ, ಉಪ್ಪು, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಹಿಂಗು, ಅರ್ಧ ಸ್ಪೂನ್ ಜೀರಿಗೆ, 5ರಿಂದ 6 ಬೆಳ್ಳುಳ್ಳಿ ಎಸಳು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ ಪುಡಿ, 2 ಸಣ್ಣಗೆ ಹೆಚ್ಚಿದ ಟೊಮೆಟೋ, 1 ಒಣಮೆಣಸು, ಅರ್ಧ ಸ್ಪೂನ್ ಕಸೂರಿ ಮೇಥಿ, ರುಚಿಗೆ ತಕ್ಕಷ್ಟು ಉಪ್ಪು, 2 ಸ್ಪೂನ್ ತುಪ್ಪ.

ಮಾಡುವ ವಿಧಾನ: ಮೊದಲು ಕುಕ್ಕರ್‌ಗೆ ತೊಗರಿ ಬೇಳೆ, ಕಡಲೆಬೇಳೆ. ಹೆಸರು ಬೇಳೆ, ಎಣ್ಣೆ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ, ಹಿಂಗು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿದುಕೊಳ್ಳಿ. ನಂತರ ಟೊಮೆಟೋ ಹಾಕಿ ಹುರಿಯಿರಿ. ಬಳಿಕ ಖಾರದ ಪುಡಿ, ಅರಿಶಿನ, ಗರಂಮಸಾಲೆ, ಧನಿಯಾಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.

ನಂತರ ಸಣ್ಣಗೆ ತುಂಡರಿಸಿದ ಪಾಲಕ್‌ನ್ನು ಚೆನ್ನಾಗಿ ತೊಳೆದು, ಸೇರಿಸಿ ಹುರಿಯಿರಿ. ನಂತರ ಬೇಯಿಸಿದ ಬೇಳೆ ಸೇರಿಸಿ, ಬೇಕಾದಷ್ಟು ನೀರು ಸೇರಿಸಿ, ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಕಸೂರಿ ಮೇಥಿ, ಖಾರದ ಪುಡಿ ಹಾಕಿ ಒಗ್ಗರಣೆ ಕೊಟ್ಟರೆ, ಪಾಲಕ್ ದಾಲ್ ರೆಡಿ.

- Advertisement -

Latest Posts

Don't Miss