Recipe: ಪ್ರೋಟೀನ್‌ ಭರಿತವಾದ ಹೆಸರು ಕಾಳಿನ ಪರೋಠ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ರಾತ್ರಿಯಿಡೀ ನೆನೆಸಿದ್ದ ಹೆಸರು ಕಾಳು, 1 ಸಣ್ಣಗೆ ಕತ್ತರಿಸಿದ ಕ್ಯಾರೆಟ್, 2 ಈರುಳ್ಳಿ, 2 ಹಸಿಮೆಣಸು, ಸಣ್ಣ ತುಂಡು ಜಿಂಜರ್, 5 ಎಸಳು ಗಾರ್ಲಿಕ್, ಅರ್ಧ ಸ್ಪೂನ್  ಸೋಂಪು, 1 ಕಪ್ ಗೋದಿ ಹುಡಿ, ಅರ್ಧ ಸ್ಪೂನ್ ಖಾರದ ಪುಡಿ, ಸ್ವಲ್ಪ ಅರಿಶಿನ, 1 ಸ್ಪೂನ್ ವೋಮ, 1 ಸ್ಪೂನ್ ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಎಣ್ಣೆ-ಬೆಣ್ಮೆ ಅಥವಾ ತುಪ್ಪ, ಉಪ್ಪು. ಅವಶ್ಯಕತೆ ಎನ್ನಿಸಿದರೆ ಎಳ್ಳು ಮತ್ತು ಕಲೋಂಜಿ.

ಮಾಡುವ ವಿಧಾನ: ಹೆಸರು ಕಾಳು, ಕ್ಯಾರೆಟ್, 1 ಈರುಳ್ಳಿ, ಹಸಿಮೆಣಸು, ಜಿಂಜರ್, ಗಾರ್ಲಿಕ್, ಸೋಂಪು ಇವೆಲ್ಲವನ್ನೂ ನೀರು ಹಾಾಕದೇ ರುಬ್ಬಿ ಪೇಸ್ಟ್ ತಯಾರಿಸಿ.

ಇದಕ್ಕೆ ಗೋದಿ ಹುಡಿ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಖಾರದ ಪುಡಿ, ಅರಿಶಿನ, ವೋಮ, ಸ್ವಲ್ಪ ಸಕ್ಕರೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ.

ಈ ಹಿಟ್ಟನ್ನು 15 ನಿಮಿಷ ಹಾಗೇ ಬಿಡಿ. ಬಳಿಕ ಚಪಾತಿಯಂತೆ ಲಟ್ಟಿಸಿ, ಅದಕ್ಕೆ ಮೇಲಿನಿಂದ ಎಳ್ಳು ಮತ್ತು ಕಲೋಂಜಿ ಹಾಕಿ ಮತ್ತೆ ಸ್ವಲ್ಪ ಲಟ್ಟಿಸಿ, ಎಣ್ಣೆ- ಬೆಣ್ಣೆ- ತುಪ್ಪ ಹಾಕಿ ಬೇಯಿಸಿದರೆ, ಪರೋಟ ರೆಡಿ.

About The Author