Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ರಾಜ್ಮಾ, 1 ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, 3 ಸ್ಪೂನ್ ತುಪ್ಪ ಅಥವಾ ಎಣ್ಣೆ, 1 ಸ್ಪೂನ್ ಜೀರಿಗೆ, 2 ಹಸಿಮೆಣಸು, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 2 ಟೊಮೆಟೋ, 1 ಸ್ಪೂನ್ ಶುಂಠಿ ಗಾರ್ಲಿಕ್ ಪೇಸ್ಟ್, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಜೀರಿಗೆ ಪುಡಿ, ಗರಂ ಮಸಾಲೆ, ಕೊಂಚ ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ನೆನೆಸಿಟ್ಟುಕೊಂಡ ರಾಜ್ಮಾವನ್ನು ಕುಕ್ಕರ್‌ಗೆ ಹಾಕಿ, ನೀರು, ಉಪ್ಪು, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಬೇಯಿಸಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ, ತುಪ್ಪ ಅಥವಾ ಎಣ್ಣೆ ಹಾಕಿ, ಜೀರಿಗೆ, ಪಲಾವ್ ಎಲೆ, ಹಸಿಮೆಣಸು ಹಾಕಿ ಹುರಿಯಿರಿ.
ಬಳಿಕ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಶುಂಠಿ ಗಾರ್ಲಿಕ್ ಪೇಸ್ಟ್ ಸೇರಿಸಿ. ಬಳಿಕ ಟೊಮೆಟೊ ಸೇರಿಸಿ ಹುರಿಯಿರಿ. ಅರಿಶಿನ, ಜೀರಿಗೆ ಪುಡಿ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಬೇಯಿಸಿದ ರಾಜ್ಮಾ ಸೇರಿಸಿ, ಉಪ್ಪು ಕಡಿಮೆಯಾಗಿದ್ದಲ್ಲಿ, ಮತ್ತಷ್ಟು ಉಪ್ಪು ಸೇರಿಸಿ, 3 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು ಸೇರಿಸಿದರೆ, ರಾಜ್ಮಾ ಮಸಾಲಾ ರೆಡಿ.