Friday, July 11, 2025

Latest Posts

Movie News: ನಟ ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್

- Advertisement -

Movie News: ಪುಷ್ಪ-2 ಸಿನಿಮಾ ಪೇಡ್ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಂಸಿದಂತೆ, ಅಲ್ಲು ಅರ್ಜುನ್ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿತ್ತು. ಇಂದು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿ, ನ್ಯಾಯಾಲಯದಲ್ಲಿ ಹಾಾಜರು ಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ಎಂದು ಕೋರ್ಟ್ ಆದೇಶ ಹೊರಡಿಸಿತ್ತು.

ಆದರೆ ಅಲ್ಲು ಅರ್ಜುನ್ ಜಾಮೀನಿಗಾಗಿ ಅಪ್ಲೈ ಮಾಡಿದ್ದು, ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಅಲ್ಲು ಅರ್ಜುನ್ ಪರ ವಕೀಲರು ಹಲವು ಕೇಸ್‌ಗಳ ಉದಾಹರಣೆ ಕೊಟ್ಟು, ವಾದ ಮಂಡಿಸಿದ್ದು, ಅಲ್ಲು ಅರ್ಜುನ್‌ಗೂ ಈ ಸಾವಿಗೂ ನೇರವಾಗಿ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಅಲ್ಲುಗೆ ಬೇಲ್ ಸಿಕ್ಕಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಏನಿದು ಕೇಸ್..?

ಸಂಧ್ಯಾ ಚಿತ್ರಮಂದಿರದಲ್ಲಿ ಪ್ರಿಮಿಯರ್ ಶೋ ಇದ್ದ ಕಾರಣ, ಓರ್ವ ವ್ಯಕ್ತಿ ಆತನ ಇಬ್ಬರು ಮಕ್ಕಳು ಮತ್ತು ಪತ್ನಿಯ ಜೊತೆ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ. ಅಂದು ಅಲ್ಲಿ ಅಲ್ಲು ಅರ್ಜುನ್ ಬರುತ್ತಾರೆ, ಪುಷ್ಪ 2 ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಲಾಗಿತ್ತು. ನೆಚ್ಚಿನ ನಟನೊಂದಿಗೆ ಆತನ ನಟನೆ ಸಿನಿಮಾವೂ ನೋಡಬಹುದು ಎಂಬ ಖುಷಿಯಲ್ಲಿ ಕುಟುಂಬ ಆ ದಿನ ಥಿಯೇಟರ್‌ಗೆ ಬಂದಿತ್ತು. ಆದರೆ ಅಲ್ಲಿ ನೆರೆದಿದ್ದ ಇತರ ಅಭಿಮಾನಿಗಳು ಅಲ್ಲು ಅರ್ಜುನ್ ಅವರನ್ನು ನೋಡಿ, ಹುಚ್ಚೆದ್ದು ಕುಣಿದಿದ್ದು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಶುರು ಮಾಡಿದ್ದರು.

ಆಗ ಕಾಲ್ತುಳಿತ ಉಂಟಾಗಿ, ಓರ್ವ ಮಹಿಳೆ ಸಾವನ್ನಪ್ಪಿದರೆ, ಆಕೆಯ ಪುತ್ರ ಸಾವು ಬದುಕಿನ ನಡುವೆ ಹೋರಾಡುವಷ್ಟು ತೀವ್ರವಾಗಿ ಅಸ್ವಸ್ಥಗೊಂಡಿದ್ದನು. ಈ ಬಗ್ಗೆ ಅಲ್ಲು ಕ್ಷಮೆ ಕೇಳಿ, ಕೇಸ್ ದಾಖಲಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಅಲ್ಲು ವಿರುದ್ಧ ಕೇಸ್ ದಾಖಲಾಗಿದ್ದು, ಅವರೇಕೆ ಚಿತ್ರ ಮಂದಿರಕ್ಕೆ ಬರಬೇಕಿತ್ತು..? ಅವರು ಬಂದಿದ್ದಕ್ಕೇ ಈ ಅವಘಡ ನಡೆಯಿತು ಎಂದು ಹೇಳಿ, ದೂರು ನೀಡಲಾಗಿತ್ತು. ಇದೀಗ ಅಲ್ಲು ಅರ್ಜುನ್ ಅವರನ್ನು ಚೀಕಟಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಅಲ್ಲುಗೆ ಬೇಲ್ ಸಿಕ್ಕಿದೆ.

- Advertisement -

Latest Posts

Don't Miss