ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಸೋಯಾ ಚಂಕ್ಸ್, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು. 1 ಸ್ಪೂನ್ ಕಾಳುಮೆಣಸು, 1 ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, 4 ಲವಂಗ, 1 ಪಲಾವ್ ಎಲೆ, 1 ಕಪ್ ಒಣಕೊಬ್ಬರಿ ತುರಿ, 4ರಿಂದ 5 ಒಣಮೆಣಸಿನಕಾಯಿ, 2 ಸ್ಪೂನ್ ಎಣ್ಣೆ, 2 ಈರುಳ್ಳಿ, 4ರಿಂದ 5 ಬೆಳ್ಳುಳ್ಳಿ ಎಸಳು, 1 ಟೊಮೆಟೋ
ಮಾಡುವ ವಿಧಾನ: ಮೊದಲು ಸೋಯಾ ಚಂಂಕ್ಸ್‌ನ್ನು ಚೆನ್ನಾಗಿ ತೊಳೆದು, ಕುದಿಯುವ ನೀರಿಗೆ ಹಾಕಿ 10 ನಿಮಿಷವಿರಿಸಿ. ಬಳಿಕ ತಣ್ಣೀರಿನಿಂದ ಆ ಸೋಯಾ ಚಂಕ್ಸ್ ಕ್ಲೀನ್ ಮಾಡಿ. ಈಗ ಇದಕ್ಕೆ ಬೇಕಾದ ಮಸಾಲೆ ತಯಾರಿಸಿಕೊಳ್ಳಿ. ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು. 1 ಸ್ಪೂನ್ ಕಾಳುಮೆಣಸು, 1 ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, 4 ಲವಂಗ, 1 ಪಲಾವ್ ಎಲೆ, 1 ಕಪ್ ಒಣಕೊಬ್ಬರಿ ತುರಿ, 4ರಿಂದ 5 ಒಣಮೆಣಸು ಹಾಕಿ ಚೆನ್ನಾಗಿ ಹುರಿಯಿರಿ.
ಈ ಮಿಶ್ರಣ ತಣಿದ ಬಳಿಕ, ಪುಡಿ ತಯಾರಿಸಿಕೊಳ್ಳಿ. ಪ್ಯಾನ್ ಬಿಸಿ ಮಾಡಿ, 2 ಸ್ಪೂನ್ ಎಣ್ಣೆ, ಉದ್ದಕ್ಕೆ ಸ್ಲೈಸ್ ಮಾಡಿದ ಈರುಳ್ಳಿ, ಕೊಂಚ ಜಜ್ಜಿದ ಬೆಳ್ಳುಳ್ಳಿ ಸೇರಿಸಿ, ಹುರಿಯಿರಿ. ಬಳಿಕ ಟೊಮೆಟೋ ಹುರಿಯಿರಿ. ಇದಕ್ಕೆ ರೆಡಿ ಮಾಡಿಕೊಂಡ ಪುಡಿಯಲ್ಲಿ 2 ಸ್ಪೂನ್ ಮಸಾಲೆ ಪುಡಿ, ಅರಿಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಕೊಂಚ ನೀರು ಹಾಕಿ ಅದು ಕುದಿ ಬರುವವರೆಗೂ ಕಾದು ಬಳಿಕ ಸೋಯಾ ಚಂಕ್ಸ್ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತೊಂಬರಿ ಸೊಪ್ಪು ಉದುರಿಸಿ, 5 ನಿಮಿಷ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿದರೆ ಸೋಯಾ ಚಂಕ್ಸ್ ಮಸಾಲೆ ರೆಡಿ. ಚಪಾತಿ, ಪೂರಿಯೊಂದಿಗೆ ಈ ಗ್ರೇವಿ ಉತ್ತಮ ಕಾಂಬಿನೇಷನ್ ಆಗಿದೆ.