Sunday, December 1, 2024

Latest Posts

Recipe: ಚಳಿಗಾಲಕ್ಕೆ ಪಾಲಕ್‌ ಸೂಪ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಚೆನ್ನಾಗಿ ತೊಳೆದ ಪಾಲಕ್, 2ರಿಂದ 3 ಹಸಿಮೆಣಸಿನಕಾಯಿ, 15 ಬೆಳ್ಳುಳ್ಳಿ ಎಸಳು, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, 2 ಸ್ಪೂನ್ ಕ್ರೀಮ್, 1 ಈರುಳ್ಳಿ, 1 ಟೊಮೆಟೋ, ಚಕ್ಕೆ, ಕಾಳುಮೆಣಸು, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ತುಪ್ಪ ಅಥವಾ ಬೆಣ್ಣೆ ಹಾಕಿ, ಈರುಳ್ಳಿ, 7 ಎಸಳು ಬೆಳ್ಳುಳ್ಳಿ, ಟೊಮೆಟೋ, ಚಕ್ಕೆ, ಕಾಳುಮೆಣಸು, ಪಾಲಕ್, ಹಸಿಮೆಣಸು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಈ ಮಿಶ್ರಣದಿಂದ ಚಕ್ಕೆ ತೆಗೆದು ಹೊರಗೆ ಇರಿಸಿ. ತಣಿದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿ.

ಬಳಿಕ ಮತ್ತೆ ಪ್ಯಾನ್ ಬಿಸಿ ಮಾಡಿ, ಪಾಲಕ್ ಪೇಸ್ಟ್ ಹಾಕಿ 5 ನಿಮಿಷ ಮಂದ ಉರಿಯಲ್ಲಿ ಕುದಿಸಿ. ಹಸಿವಾಸನೆ ಹೋಗುವವರೆಗೂ ಪಾಲಕ್ ಕುದಿಸಿ. ಬಳಿಕ ಒಗ್ಗರಣೆ ಸೌಟಿನಲ್ಲಿ ತುಪ್ಪ ಹಾಕಿ, ಉಳಿದ ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿ, ಹುರಿಯಿರಿ. ರೆಡಿಯಾದ ಸೂಪ್‌ಗೆ ಈ ಒಗ್ಗರಣೆ ಕೊಟ್ಟು, ಕ್ರೀಮ್ ಸೇರಿಸಿದರೆ, ಪಾಲಕ್ ಸೂಪ್ ರೆಡಿ.

- Advertisement -

Latest Posts

Don't Miss