Thursday, December 5, 2024

Latest Posts

ಲೋ ಬಿಪಿ ಇದ್ದವರು ಮನೆಯಲ್ಲೇ ಈ ರೀತಿ ಚಿಕಿತ್ಸೆ ಪಡೆಯಬಹುದು

- Advertisement -

Health tips: ಇಂದಿನ ದಿನದಲ್ಲಿ ಯುವ ಪೀಳಿಗೆಯವರಿಗೆ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಯಾರು ಹೆಚ್ಚು ಆ್ಯಕ್ಟೀವ್ ಇರುವುದಿಲ್ಲವೋ, ಆಲಸ್ಯದಿಂದ ಇರುತ್ತಾರೋ, ಅಂಥವರಲ್ಲಿ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಾವಿಂದು ಲೋ ಬಿಪಿ ಇದ್ದರೆ, ಅದಕ್ಕೆ ಏನೇನು ಮನೆ ಮದ್ದು ಮಾಡಬಹುದು ಅೞತಾ ಹೇಳಲಿದ್ದೇವೆ.

ಮೊದಲನೇಯದಾಗಿ ಜೇಷ್ಠಮಧುವಿನ ಚಹಾ ಸೇವಿಸಿ. ಇದರ ಚಹಾದಿಂದ ಲೋ ಬಿಪಿ ಕಂಟ್ರೋಲಿಗೆ ಬರುತ್ತದೆ. ಜೇಷ್ಟಮಧುವಿನ ಚಹಾ ಎಂದರೆ, ಇಲ್ಲಿ ನೀವು ಚಹಾದ ಪುಡಿ ಬಳಸುವಂತಿಲ್ಲ. ಜೇಷ್ಟಮಧುವಿನ ಪುಡಿಯನ್ನು ಬಳಸಿ, ಕಶಾಯ ಮಾಡಿ ಕುಡಿಯಬೇಕು. ಇದನ್ನು ಕಶಾಯ ಮತ್ತು ಚಹಾ ಅಂತಲೂ ಕರೆಯುತ್ತಾರೆ.

ಇನ್ನು ಎರಡನೇಯದಾಗಿ ತುಳಸಿ ಎಲೆ ಸೇವಿಸಿ. ರವಿವಾರದ ದಿನ ಬಿಟ್ಟು, ಉಳಿದ ಯಾವ ದಿನ ಬೇಕಾದರೂ ನೀವು ತುಳಸಿ ಎಲೆ ತಿನ್ನಬಹುದು. ಅದರಲ್ಲೂ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಎರಡೇ ಎರಡು ತುಳಸಿ ಸೇವಿಸಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬಿಪಿ ಕೂಡ ಕಂಟ್ರೋಲಿಗೆ ಬರುತ್ತದೆ.

ಪಾಲಕ್, ನಿಂಬೆಹಣ್ಣು, ಕಿತ್ತಳೆ ಹಣ್ೞು, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಮೊಳಕೆ ಕಾಳುಗಳ ಸೇವನೆ ಹೆಚ್ಚು ಮಾಡಬೇಕು. ಇದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ. ದೇಹದಲ್ಲಿ ಸೋಡಿಯಮ್ ಕಡಿಮೆಯಾದಾಗ ಲೋ ಬಿಪಿಯಾಗುತ್ತದೆ. ಹಾಗಾಗಿ ನೀವು ನಿಮ್ಮ ಊಟದಲ್ಲಿ ಉಪ್ಪಿನ ಪ್ರಮಾಣವನ್ನು ಕೊಂಚ ಮಟ್ಟಿಗೆ ಹೆಚ್ಚಿಗೆ ಮಾಡಿಕೊಳ್ಳಬಹುದು. ಹಾಗಾಗಿ ನೀವು ನಾರ್ಮಲ್ ಉಪ್ಪು ಬಳಸುವ ಬದಲು, ಸೈಂಧವ ಲವಣ ಬಳಸಿ.

ಇನ್ನು ಮುಖ್ಯವಾಗಿ ಹೆಚ್ಚು ಹೊತ್ತು ಬಾತ್‌ರೂಮ್‌ನಲ್ಲಿ ಕಳೆಯಬೇಡಿ. ಅದರಲ್ಲೂ ಹೆಚ್ಚು ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಲೇಬೇಡಿ. ಯಾರು ಹೆಚ್ಚು ಹೊತ್ತು, ಹೆಚ್ಚು ಬಿಸಿ ಬಿಸಿಯಾದ ನೀರಿನಿಂದ ಸ್ನಾನ ಮಾಡುತ್ತಾರೋ. ಅಂಥವರಿಗೆ ಬೇಗ ಲೋ ಬಿಪಿ, ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದ ಬೇಗ ಸ್ನಾನ ಮಾಡಿ ಬರುವುದನ್ನು ಕಲಿಯಿರಿ.

ಹೆಚ್ಚು ನೀರು ಕುಡಿಯಿರಿ. ಆದರೆ ನೆನಪಿರಲಿ ನೀವು ಕುಡಿದ ನೀರು ಜೀರ್ಣವಾಗುತ್ತಲಿರಬೇಕು. ನಿಮಗೆ ಬಾಯಾರಿಕೆಯಾದಾಗಲೆಲ್ಲ, ನೀರು ಕುಡಿಯುತ್ತಲೇ ಇರಿ. ಓರ್ವ ಮನುಷ್ಯ ದಿನಕ್ಕೆ 3 ಲೀಟರ್‌ನಷ್ಟು ನೀರು ಕುಡಿಯಬಹುದು.

- Advertisement -

Latest Posts

Don't Miss