Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಅರಿಶಿನ, ಧನಿಯಾಪುಡಿ, ಚಾಟ್ ಮಸಾಲೆ, ಉಪ್ಪು, ಅರ್ಧ ಕಪ್ ಮೊಸರು, ಕೊಂಚ ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ತುಪ್ಪ.
ಮಾಡುವ ವಿಧಾನ: ಕುಕ್ಕರ್‌ನಲ್ಲಿ ಎಣ್ಣೆ, ಜೀರಿಗೆ ಹಾಕಿ ಹುರಿಯಿರಿ ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಹಾಕಿ ಹುರಿದು ಅದರೊಂದಿಗೆ ಉಪ್ಪು, ಅರಿಶಿನ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಆಲೂ ಗಡ್ಡೆ ಹಾಕಿ ಕುಕ್ಕರ್ ವಿಶಲ್ ತರಿಸಿ. ಬಳಿಕ ಮೊಸರು ಹಾಕಿ, ಗ್ರೇವಿಯಲ್ಲಿ ಅರ್ಧ ಭಾಗ ಪೇಸ್ಟ್ ಮಾಡಿಕೊಳ್ಳಿ. ಇನ್ನರ್ಧ ಭಾಗ ಹಾಗೇ ಇರಲಿ. ಇವೆರಡೂ ಭಾಗವನ್ನು ಸೇರಿಸಿ, ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ತುಪ್ಪ ಹಾಕಿ ಮಿಕ್ಸ್ ಮಾಡಿದ್ರೆ, ಆಲೂಗಡ್ಡೆ- ಈರುಳ್ಳಿ ಗ್ರೇವಿ ರೆಡಿ.