Saturday, July 27, 2024

Latest Posts

ವ್ಯಾಕ್ಸಿನ್ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು. 

- Advertisement -

ವಿಧಾನಸೌಧ : ಇಂದು ನಡೆದಂತಹ ಸಭೆಯಲ್ಲಿ ಆರೋಗ್ಯ ತಾಂತ್ರಿಕ ಸಲಹಾ ಸಮಿತಿಯು ವ್ಯಾಕ್ಸಿನ್ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ನೀಡಿದೆ.  ಆರೋಗ್ಯ ತಾಂತ್ರಿಕ ಸಲಹಾ ಸಮಿತಿಯು ಲಾಕ್ ಡೌನ್ ಮಾಡಬಾರದು, ಹಾಗೂ ಕೋವಿಡ್ ಮೂರನೇ ಅಲೆ ಆಗಿರುವಂತಹ ಓಮಿಕ್ರಾನ್ ನನ್ನು ತಡೆಯಬೇಕಾದರೆ 2 ಡೋಜ್ ಕರೋನಾ ಲಸಿಕೆ ಕಡ್ಡಾಯ ಮಾಡಬೇಕೆಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ಡಾ. ಸುದರ್ಶನ್ ಬಲ್ಲಾಳ್, ಡಾ. ಸುದರ್ಶನ್ ಹಾಗೂ ತಜ್ಞರ ಸಮಿತಿ ಹೇಳಿದೆ.

ಆರೋಗ್ಯ ತಜ್ಞರ ಇಲಾಖೆಯು ಸರ್ಕಾರಕ್ಕೆ ನೀಡಿರುವ ಶಿಫಾರಸ್ಸುಗಳು

ಹೊರಾಂಗಣ ಸಮಾರಂಭಗಳಿಗೆ 500 ಜನರಿಗೆ ಸೀಮಿತ.

ಒಳಾಂಗಣ ಸಮಾರಂಭಗಳಿಗೆ 200 ಜನರಿಗೆ ಸೀಮಿತ.

ಏರ್ಪೋರ್ಟ್ ರೈಲ್ವೆ ನಿಲ್ದಾಣಗಳಲ್ಲಿ ವ್ಯಾಕ್ಸಿನ್ ನೀಡಬೇಕು.

ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ತರಗತಿಗಳನ್ನು ನಡೆಸಬೇಕು.

ಶಿಕ್ಷಕರಿಗೂ ಕೋವಿಡ್ ಟೆಸ್ಟ್  ಕಡ್ಡಾಯ.

ಒಮಿಕ್ರಾನ್ ಗೆ ಬೌರಿಂಗ್ ಆಸ್ಪತ್ರೆ ಮೀಸಲಿಡಬೇಕು.

ಶಾಲಾ ಕಾಲೇಜುಗಳು ಮುಚ್ಚುವ ಅಗತ್ಯವಿಲ್ಲ.

ವಾರಕ್ಕೆ ಶೇಕಡಾ ಐದರಷ್ಟು ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಬೇಕು.

ಅಂತರಾಷ್ಟ್ರೀಯ ಪ್ರಯಾಣಿಕರಿಗೆ  ಏಳು ದಿನ ಕ್ವಾರಂಟೈನ್.

ಸಿಲಿಂಡರ್,  ಪೆಟ್ರೋಲ್ ಡೀಸೆಲ್, ವಿದ್ಯುತ್, ನೀರು, ಸಂಬಳ, ಪಿಂಚಣಿ, ಪಡಿತರಕ್ಕೆ, ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಎರಡು ಡೋಜ್ ವ್ಯಾಕ್ಸಿನ್ ಕಡ್ಡಾಯ ಮಾಡಬೇಕು ಎಂದು ಆರೋಗ್ಯ ತಜ್ಞರ ಶಿಫಾರಸ್ಸಿ ನಲ್ಲಿದೆ. ಇದನ್ನು ಸರ್ಕಾರ ಯಾವ ರೀತಿ ಜಾರಿಗೊಳಿಸುತ್ತದೆ ಎಂದು ಕಾದುನೋಡಬೇಕಿದೆ.

- Advertisement -

Latest Posts

Don't Miss