ಕರ್ನಾಟಕ : 7 ದಿನಕ್ಕೆ ಬರೋಬ್ಬರಿ 25.83 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲೂ ರೇಕಾರ್ಡ್ ಮಾಡಿದೆ. ಎಸ್ ಮಹೇಶ್ ಕುಮಾರ್ ನಿರ್ದೇಶಿಸಿ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರ ಸುಮಾರು 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದೆ. ಬಿಡುಗಡೆ ಆಗಿರುವ ಎಲ್ಲ ಕಡೆ ನಿರೀಕ್ಷೆಯಂತೆ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ರಾಜ್ಯದ ಏಕಪರದೆಯ ಚಿತ್ರಮಂದಿರಗಳಲ್ಲಿ ಶೇ.90ರಷ್ಟು ಪ್ರೇಕ್ಷಕರ ಹಾಜರಾತಿ ಇದ್ದರೆ, ಮಲ್ಟಿಪ್ಲೆಕ್‌ಸ್ ಗಳಲ್ಲಿ ಶೇ.65ರಷ್ಟು ಪ್ರೇಕ್ಷಕರು ತುಂಬಿದ್ದಾರೆ.
ರಾಜ್ಯಾದ್ಯಾಂತ 7 ದಿನದಲ್ಲಿ 25.83 ಕೋಟಿ ಗಳಿಕೆ ಮಾಡಿದ್ದು, ಪ್ರದೇಶವಾರು ಕಲೆಕ್ಷನ್ ನೋಡಿದರೆ ಬೆಂಗಳೂರು, ಕೋಲಾರ, ತುಮಕೂರು 11 ಕೋಟಿ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ 5.13 ಕೋಟಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ 3.7 ಕೋಟಿ, ದಾವಣಗೆರೆ 1 .5 ಕೋಟಿ, ಹೈದರಾಬಾದ್ ಕರ್ನಾಟಕದಲ್ಲಿ 4.5 ಕೋಟಿ ಗಳಿಸಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎನ್ನುವ ನಂಬಿಕೆ ಇತ್ತು. ಆದರೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎನ್ನುವ ಭಯ ಇತ್ತು.. ಹೀಗಾಗಿ ಆರಂಭದಲ್ಲಿ ಕೊಂಚ ಆತಂಕ ಇದ್ದಿದ್ದು ನಿಜ. ಈಗ ಆ ಭಯ ಇಲ್ಲ. ನಮ್ಮ ನಿರೀಕ್ಷೆಯಂತೆ ಜನ ಸಿನಿಮಾ ನೋಡುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಬೇರೆ ಭಾಷೆಯವರು ಸಿನಿಮಾ ನೋಡುತ್ತಿದ್ದಾರೆ’. ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ ಹೀಗೆ ಮಾಸ್ ಪ್ರೇಕ್ಷಕರು ಇರುವ ಪ್ರದೇಶಗಳಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಈಗ 25.83 ಕೋಟಿ ಕಲೆಕ್ಷನ್ ಆಗಿದೆ. ನಮ್ಮ ಸಿನಿಮಾ ಗೆದ್ದಿದೆ. ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಕೈ ಬಿಡಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಮಾಡಿದ್ದಕ್ಕೂ ಸಾರ್ಥಕವಾಯಿತು. ಆ್ಯಕ್ಷನ್ ಹಾಗೂ ತಾಯಿ ಸೆಂಟಿಮೆಂಟ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ ಎನ್ನುತ್ತಾರೆ ನಿರ್ದೇಶಕ ಎಸ್ ಮಹೇಶ್ ಕುಮಾರ್.