Wednesday, October 22, 2025

Latest Posts

Arun kathare : ಮೈತುಂಬಾ ಚಿನ್ನ.. ಕೈಯಲ್ಲಿ ಎಕೆ 47! : ಅರುಣ್ ಕಟಾರೆ ಅರೆಸ್ಟ್!

- Advertisement -

ಬೆಂಗಳೂರು: ಮೈ ತುಂಬಾ ಬಂಗಾರ, ಐಷಾರಾಮಿ ಕಾರುಗಳು, ಕೈಯಲ್ಲಿ ಎಕೆ47 ಹಿಡಿದ ಇಬ್ಬರು ಗನ್ ಮ್ಯಾನ್‌ಗಳನ್ನುಇಟ್ಕೊಂಡು ಶೋ ಕೊಡುತ್ತಿದ್ದ ರೀಲ್ಸ್ ಶೋಕಿದಾರ ಅರುಣ್ ಕಟಾರೆಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ರೀಲ್ಸ್​​ ಹುಚ್ಚಿನಿಂದ ಫುಲ್​ ರಿಚ್​ ಆಗಿ ಕಾಣಿಸಿಕೊಳ್ಳಲು ಮೈಮೇಲೆ ಕೆಜಿಗಟ್ಟಲೇ ಚಿನ್ನ ಧರಿಸಿಕೊಂಡು ಶೋ ಕೊಡಲು ಹೋಗಿ ಈಗ ರೋಲ್ಡ್ ಗೋಲ್ಡ್ ಸ್ಟಾರ್ ಜೈಲು ಕಂಬಿ ಎಣಿಸುವಂತಾಗಿದೆ.
ಅರುಣ್ ಕಟಾರೆ.. ಎಕೆ 47 ಮಾದರಿಯ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಮಾಡಿದ್ದಾರೆ. ಅವರ ಶೋ ಅಪ್‌ಗೆ ಬೆದರಿದ ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ವಿವಿಧೆಡೆ ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ ಅಪ್ ಕೊಡುತ್ತಿದ್ದವನ ಬಗ್ಗೆ ಬೆಂಗಳೂರು ನಿವಾಸಿಗಳು ರೌಡಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದೂರಿನ ಹಿನ್ನೆಲೆ ಬೆಂಗಳೂರಿನ ಕೊತ್ತನೂರು ಪೊಲೀಸರಿಂದ ಅರುಣ್ ಕಟಾರೆಯ ಬಂಧನವಾಗಿದೆ.
ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಕೆಲವು ಶ್ರೀಮಂತ ಉದ್ಯಮಿಗಳು ಮತ್ತು ಅವರ ಮಕ್ಕಳು ಮೈಮೇಲೆ 5 ರಿಂದ 10 ಕೆ.ಜಿ ಬಂಗಾರದ ಆಭರಣನ್ನು ಧರಿಸಿ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಶೋಕಿ ಮಾಡುತ್ತಾರೆ. ಕರ್ನಾಟಕದವರೇ ಆದ ಅರುಣ್ ಕಟಾರೆ ಕೂಡ ಕೆ.ಜಿ.ಗಟ್ಟಲೆ ಬಂಗಾರವನ್ನು ಮೈಮೇಲೆ ಧರಿಸಿಕೊಂಡು ರೀಲ್ಸ್ ಮಾಡುತ್ತಿದ್ದನು.
ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಶೋಕಿ ಮಾಡುತ್ತಿದ್ದವನು ಈಗ ಬೆಂಗಳೂರಿಗೂ ಬಂದಿದ್ದನು. ಈತನ ಶೋಕಿ ರೀಲ್ಸ್ ನೋಡಿದ ಬೆಂಗಳೂರಿನ ಖಾಕಿ ಪಡೆ ಶೋಕಿ ಮಾಡುತ್ತಿದ್ದ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದು ನಕಲಿ ಗನ್ ಎಂದು ಆತ ಬಾಯಿ ಬಿಟ್ಟಿದ್ದಾನೆ. ಇನ್ನು ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅರುಣ್ ವಿರುದ್ಧ ಆರ್ಮ್ಸ್ ಕಾಯ್ದೆ 290ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಒಟ್ಟಿನಲ್ಲಿ ರೀಲ್ಸ್ ಶೋಕಿಯಲ್ಲಿ ಮೈ ಮರೆತ ಶೋಕಿದಾರ ಈಗ ಪರಪ್ಪನ ಅಗ್ರಹಾರ ಸೇರಿದ್ದಾನೆ.

- Advertisement -

Latest Posts

Don't Miss