- Advertisement -
ಮಂಗಳೂರು: ಪ್ರತಿ ವರ್ಷ ವಿದೇಶದಿಂದ ಅಡಿಕೆ ಆಮದಾಗುತ್ತಿದ್ದು, ಈ ಬಾರಿಯೂ ಕೂಡ ಅಷ್ಟೇ ಪ್ರಮಾಣದ ಅಡಿಕೆ ಆಮದಾಗಿದೆ. ಇದರಿಂದ ರೈತರು ಆತಂಕ ಪಡಬೇಕಾಗಿಲ್ಲ.
ಅಡಿಕೆ ಆಮದು ತಡೆಗೆ ಕ್ಯಾಂಪ್ಕೊ ಸರ್ವೆ ರೀತಿಯಲ್ಲೂ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಮುಂಗಾರು ಪ್ರಾರಂಭವಾಗಿ ಉತ್ತರ ಭಾರತದಲ್ಲಿ ಉಷ್ಣತೆ ಕಡಿಮೆಯಾಗಲಿದ್ದು, ಅಡಿಕೆಗೆ ಉತ್ತಮ ಬೇಡಿಕೆ ಬರುವ ಅವಕಾಶಗಳಿವೆ. ಆ ಬಳಿಕ ಸಹಜವಾಗಿಯೇ ಅಡಿಕೆ ಬೇಡಿಕೆ ಹೆಚ್ಚಾಗಲಿದೆ. ಹಾಗಾಗಿ ಅಗತ್ಯ ಖರ್ಚಿಗೆ ಬೇಕಾದಷ್ಟೇ ಅಡಿಕೆ ಮಾರಾಟ ಮಾಡಿ ಎಂದು ತಿಳಿಸಿದರು.
- Advertisement -