Political News: ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಆನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರಿನಲ್ಲಿ ವಿರೋಧ ವ್ಯಕ್ತವಾಗುತ್ತದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಶಾಸಕರ ರಾಜೀನಾಮೆಯನ್ನು ಕೆಪಿಪಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಡೆಹಿಡಿದಿದ್ದಾರೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಹರಿಪ್ರಸಾದ್, ಈಗಾಗಲೇ ನಾನು ರಾಮಲಿಂಗ ರೆಡ್ಡಿ ಬಳಿ ಮಾತಾಡಿದ್ದೇನೆ. ಸಿಎಂ ಕೂಡ ಮಾತಾಡಿದ್ದಾರೆ. ದುಡುಕಿ ರಾಜೀನಾಮೆ ಕೊಡೋದಲ್ಲ, ಸಮಸ್ಯೆ ಪರಿಹಾರ ಮಾಡೋಕೆ ನಾವೆಲ್ಲ ಕೆಲಸ ಮಾಡಬೇಕು. ವಿನಃ ದುಡುಕಿ ರಾಜೀನಾಮೆ ಕೊಡೋದು ಸರಿಯಲ್ಲ ಅನ್ನೋದನ್ನು ಸಹ ಅವರಿಗೆ ಗಮನಕ್ಕೆ ತಂದಿದ್ದೇನೆ. ಅವರು ಈಗ ಮುಖ್ಯಮಂತ್ರಿಗಳೂ ಸಹ ಮಾತಾಡಿರುವುದರಿಂದ, ಅವರು ಬರುವವರೆಗೂ ಕಾದು, ಆಮೇಲೆ ನಿರ್ಧಾರ ಮಾಡೋಣ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ನಮ್ಮ ಶಾಸಕರಿಂದಲೇ ಆರೋಪ ಅಂತಲ್ಲ. ಈಗ ಪ್ರಾಣಿಗಳನ್ನು ಸಹ ನಾವು ಮನುಷ್ಯರ ಲೆವೆಲ್ನಲ್ಲಿ ಅವರನ್ನು ಸಹ ನೋಡಬೇಕಾಗುತ್ತೆ. ಯಾವುದೋ ಒಂದು ಕಾರಣಕ್ಕಾಗಿ ಆಗೋಗಿದೆ, ಅದನ್ನು ಸರಿ ಮಾಡುತ್ತೇವೆ ಅಂತ ಹೇಳಿ ಈಗಾಗಲೇ ಹೇಳಿದ್ದಾರೆ. ಆ ಸಂಬಂಧಪಟ್ಟವರಿಗೂ ನಾನು ಸಹ ಮಾತಾಡಿದ್ದೇನೆ. ರಾಮಲಿಂಗ ರೆಡ್ಡಿ ಅವರಿಗೂ ಮಾತಾಡಿದ್ದೇನೆ ಸ್ಥಳೀಯ ಶಾಸಕರಿಗೂ ಮಾತಾಡಿದ್ದೇನೆ. ಅವರ ಸಲುವಾಗಿ ಏನೂ ಮಾಡೋದು ಬೇಡ. ಅದಕ್ಕೆ ಪರಿಹಾರ, ಸಮಸ್ಯೆಗೆ ಪರಿಹಾರ ಹುಡುಕೋಣ ಅಂತ ಹೇಳಿದ್ದಾರೆ. ಸದ್ಯಕ್ಕೆ ರಾಜೀನಾಮೆ ನಿರ್ಧಾರದಿಂದ ವಾಪಸ್ ಬಂದಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸದ್ಯಕ್ಕೆ ಅವರು ರಾಜೀನಾಮೆ ಅವರೇ ಇಟ್ಟುಕೊಳ್ಳಿ ಅಂತ ಹೇಳಿದ್ದೇನೆ. ಆನಂತರ ಮುಖ್ಯಮಂತ್ರಿಗಳು ಬಂದ ಮೇಲೆ ಚರ್ಚೆ ಮಾಡಿ ಅದನ್ನು ಬಗೆಹರಿಸುತ್ತೇವೆ. ರಾಜೀನಾಮೆ ಕೊಡುವ ಮಟ್ಟಕ್ಕೆ ಹೋಗಲ್ಲ. ಆದರೆ ಶಾಸಕರ ಪರಿಸ್ಥಿತಿ ಹಂಗಿದೆ, ಗಂಭೀರವಾದ ಪರಿಸ್ಥಿತಿ ಇದೆ. ಯಾಕಂದ್ರೆ ಅವರು ಹೇಳುವುದು ನಿಜಾನೆ. ಚಿಕ್ಕಮಂಗಳೂರಲ್ಲಿ ಆಗಲೇ ಒಂದು ಸುಮಾರು 20, 22 ಜನ ಸತ್ತು ಹೋಗಿದ್ದಾರೆ. ಆದ್ದರಿಂದ ಅಲ್ಲಿನ ಜನಗಳ ಅನಿಸಿಕೆಗಳನ್ನು ಅವರು ಹೇಳಿದ್ದಾರೆ. ಅದನ್ನು ಬಗೆಹರಿಸುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ..




