ಹಾಸನ: ಹಾಸನದಲ್ಲಿ ನಡೆದ ದಿಶಾ ಸಭೆಯಲ್ಲಿ ರೇವಣ್ಣ ಕೆಂಡಾಮಂಡಲವಾಗಿದ್ದಾರೆ. ರಾಜ್ಯ ಪರಿಸರ ಇಲಾಖೆ ಅಧಿಕಾರಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಬಂದಿದ್ದು, ಜಲ್ಲಿ ಕ್ರಶರ್ ಮಾಡಲು 14 ಲಕ್ಷ ಲಂಚ ಪಡೆದು ಅನುಮತಿ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಖಾಲಿ ಜಮೀನಿರೊ ಪ್ರದೇಶಕ್ಕೆ ಕ್ರಸರ್ ಎಂದು ಅನುಮತಿ ನೀಡಿರೊ ಆರೋಪವಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಅವರನ್ನು ಅಮಾನತು ಮಾಡಬೇಕು ಎಂದು ದಿಶಾ ಸಭೆಯಲ್ಲಿ ರೇವಣ್ಣ ಗರಂ ಆಗಿದ್ದಾರೆ.
ದಿಶಾ ಸಭೆಯಲ್ಲಿ ಡಿಸಿ ಭಾಗಿಯಾಗಿದ್ದು, ಅವರ ಬಳಿ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ. ಇವರನ್ನು ಲೂಟಿ ಮಾಡೋಕೆ ಕಳಿಸಿದಾರೇನ್ರಿ..? ಇವರ ಮೇಲೆ ಕ್ರಮ ಆಗದಿದ್ದರೆ ನೀವು ಇವರ ಜೊತೆ ಇದೀರಿ ಅಂತಾ ಆಗುತ್ತೆ. ಯಾವನಲೇ ನೀನು, ಇಂತಹವರ ಮೇಲೆ ಕ್ರಿಮಿನಲ್ ಕೇಸ್ ಆಗಬೇಕು. ಇಂತಹ ಲೂಟಿಕೋರರ ಮೇಲೆ ಕೇಸ್ ಆಗಬೇಕು.. ತಿಂಗಳಿಗೆ 65 ಸಾವಿರ ಮೆಟ್ರಿಕ್ ಟನ್ ಗೆ ಹೇಗೆ ಅನುಮತಿ ಕೊಟ್ಟರು . ಈ ರಾಜ್ಯ ಲೂಟಿ ಕೋರರ ಕೈ ಸೇರಿದೆ ಲೂಟಿ ಲೂಟಿ ಎಂದು ರೇವಣ್ಣ ಅಧಿಕಾರಿಗಳ ವಿರುದ್ಧ ಕೂಗಾಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಅಲ್ಲದೇ, ಎಲ್ಲ ಅಧಿಕಾರಿಗಳು ಕ್ರಸರ್ ಮಾಡಲು ವಿರೋಧ ಮಾಡಿದ ಮೇಲೆ ಇವರು ಹೇಗೆ ಅನುಮತಿ ಕೊಡ್ತಾರೆ ರೀ..? ಜಾಗವೇ ಇಲ್ಲದ ಜಾಗಕ್ಕೆ ಹೇಗ್ರಿ ಅನುಮತಿ ಕೊಟ್ರಿ..? ಅಧಿಕಾರಿಗಳು ಇಬ್ಬರು ಸೇರಿ 14 ಲಕ್ಷ ತಗೊಂಡಿದಾರೆ ಮೇಡಂ ಎಂದು ರೇವಣ್ಣ ಆರೋಪಿಸಿದರು.
ಕೇವಲ ಲೈಸೆನ್ಸ್ ಫೀಜ್ ತಗೊಂಡಿದಿವಿ ಮೇಡಂ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವೇಳೆ ಲೈಸೆನ್ಸ್ ಫೀಜ್ 14 ಲಕ್ಷಾನಾ ಎಂದು ಡಿಸಿ ಪ್ರಶ್ನಿಸಿದ್ದಾರೆ. ಎಲ್ಲಾ ಆನ್ಲೈನ್ ಇರುತ್ತೆ ಎಂದು ಅಧಿಕಾರಿಗಳು ಹೇಳಿದರು. ಈ ವೇಳೆ ಫೀಸ್ ಬೇರೆ ಅದಲ್ಲದೇ, 14 ಲಕ್ಷ ತಗೊಂಡಿದ್ದಾರೆ ಮೇಡಂ ಎಂದು ರೇವಣ್ಣ ಆರೋಪಿಸಿದರು. ಅಲ್ಲದೇ ನೋಡಿ ಮೇಡಂ ನಿಮ್ ಕೈ ಮುಗಿತಿವಿ ಕ್ರಮ ಆಗಬೇಕು ಎಂದು ರೇವಣ್ಣ ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಮೋದಿ ಆಗಮನಕ್ಕೆ ಸಿದ್ಧತೆ ಹೇಗಿದೆ ಗೊತ್ತಾ…?
ಮೊಬೈಲ್ ಕ್ರಸರ್ ಇದೆ ಎಂದು ಹೇಗೆ ಅನುಮತಿ ಕೊಟ್ಟಿರಿ..? ಮೊಬೈಲ್ ಕ್ರಸರ್ ಕೆಪಾಸಿಟಿ ಎಷ್ಟುರಿ..? ನೀವು ಹೇಗೆ 65 ಸಾವಿರ ಮೆಟ್ರಿಕ್ ಟನ್ ಜಲ್ಲಿ ಎತ್ತಲು ಅನುಮತಿ ಕೊಟ್ಟರು ಹೇಳ್ರಿ..? ನಿಮ್ ಸಚಿವರು ಯಾರ್ರಿ, ಯಾರು ಹೇಳಿ ಎಂದು ರೇವಣ್ಣ ಅಧಿಕಾರಿಗೆ ವಾರ್ನ್ ಮಾಡಿದರು. ಈ ವೇಳೆ ಅಧಿಕಾರಿಗಳು, ಸಚಿವರು ಆನಂದ್ ಸಿಂಗ್ ಎಂದು ಹೇಳಿದರು. ಆನಂದ್ ಸಿಂಗ್‌ಗೆ ತಾಕತ್ತು ಇದ್ದರೆ ಈ ಜಿಲ್ಲೆಯಲ್ಲಿ ನಡೆಯುತ್ತಿರೊ ಅಕ್ರಮದ ಬಗ್ಗೆ ತನಿಖೆ ಮಾಡಿಸಲಿ ಎಂದು ದಿಶಾ ಸಭೆಯಲ್ಲಿ ರೇವಣ್ಣ ಗರಂ ಆಗಿದ್ದಾರೆ.
ಯಾರಾದ್ರು ಕಾಮಗಾರಿ ನಡೆಯುತ್ತಿದ್ದರೆ ಮಾತ್ರ ಮೊಬೈಲ್ ಕ್ರಸರ್ ಮಾಡಲು ಅವಕಾಶ ಇದೆ. ಆದರೆ ಪರ್ಮನೆಂಟ್ ಪ್ಲಾಂಟ್ ಹೇಗೆ ಕೊಟ್ರಿ ಹೇಳಿ..? ಅವರಿಗೆ ಬಂಡೆ ಅಲಾಟ್ ಆಗಿದೆಯೇನ್ರಿ..? ಬಂಡೆಯೇ ಇಲ್ಲದೆ ಹೇಗ್ರಿ ಅವರಿಗೆ ಅವಕಾಶ ಮಾಡಿಕೊಟ್ಟಿರಿ..? ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ರೇವಣ್ಣ ಗರಂ ಆಗುತ್ತಲೇ ಅಧಿಕಾರಿಗಳು ದಂಗಾಗಿದ್ದು, ಇಲ್ಲಾ ಸಾರ್ ಏನು ತಪ್ಪಾಗಿಲ್ಲಾ ಎಂದು ಹೇಳಿದರು.