Tuesday, April 30, 2024

Latest Posts

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

- Advertisement -

ಗೋವನ್ನ ಹಿಂದೂಗಳು ತಾಯಿಯ ರೂಪದಲ್ಲಿ ನೋಡುತ್ತಾರೆ. ಗೋವು ಎಂಥ ಶಕ್ತಿಶಾಲಿ ಪ್ರಾಣಿ ಅಂದರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಭೂಮಿ ಬಲವಾಗಿರುವುದೇ ಗೋವುಗಳಿಂದ. ಗೋವುಗಳ ದೇಹದಿಂದ ಬರುವ ವೈಬ್ರೇಷನ್‌ಗಳೇ ಭೂಮಿ ಬಲವಾಗಿರುವುದಕ್ಕೆ ಕಾರಣ ಎಂದಿದ್ದಾರೆ ವಿಜ್ಞಾನಿಗಳು. ಆದ್ರೆ ಗೋವು ತಾನು ಮಾಡಿದ ತಪ್ಪಿಗೆ ಸೀತೆಯಿಂದ ಶಾಪವೊಂದನ್ನ ಪಡೆದಿತ್ತು. ಹಾಗಾದ್ರೆ ಗೋವು ಏನು ತಪ್ಪು ಮಾಡಿತ್ತು..? ಸೀತೆ ಗೋವಿಗೆ ಕೊಟ್ಟ ಶಾಪವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..

ದಶರಥನಿಗೆ ಮಕ್ಕಳಿಲ್ಲದ ಕಾರಣ, ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದಾಗ ಮೊದಲು ಜನಿಸಿದವನೇ ಶ್ರೀರಾಮ. ಹಾಗಾಗಿ ಹಿರಿಯ ಮಗನಾದ ಶ್ರೀರಾಮನ ಮೇಲೆ ದಶರಥನಿಗೆ ಪ್ರೀತಿ ಹೆಚ್ಚಿತ್ತು. ಶ್ರೀರಾಮನ ವಿವಾಹವನ್ನು ಸೀತೆಯೊಂದಿಗೆ ಬಲು ಜೋರಾಗಿ ಮಾಡಿ ಸಂಭ್ರಮದಲ್ಲಿದ್ದ ದಶರಥನಿಗೆ ಕೈಕೆ ತನಗೆ ನೀಡಿದ ಹಳೆ ಮಾತನ್ನು ನೆನಪಿಸಿದಳು.

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 1

ಆಗ ದಶರಥ ಶ್ರೀರಾಮನನ್ನು ಒಲ್ಲದ ಮನಸ್ಸಿನಿಂದಲೇ ಕಾಡಿಗೆ ಕಳುಹಿಸಿದ. ಶ್ರೀರಾಮನ ಜೊತೆ ಲಕ್ಷ್ಮಣ ಮತ್ತು ಸೀತೆಯೂ ಹೊರಟರು. ರಾಮನ ವನವಾಸ ಕಾಲದಲ್ಲೇ, ರಾಮನ ನೆನಪಿನಲ್ಲೇ ದಶರಥ ಸಾವನ್ನಪ್ಪಿದ. ಭರತ, ಶತ್ರುಘ್ನರು ತಂದೆಯ ಶ್ರಾದ್ಧಕಾರ್ಯ ಮಾಡಿದರು. ಪಿಂಡದಾನ ಮಾಡಿದರು. ಆದ್ರೆ ಪ್ರಿಯ ಪುತ್ರನಾದ ಶ್ರೀರಾಮನೇ ಪಿಂಡ ಪ್ರಧಾನ ಮಾಡಲಿಲ್ಲವೆಂದು ದಶರಥನ ಆತ್ಮಕ್ಕೆ ಶಾಂತಿ ಸಿಗಲಿಲ್ಲ.

ಇತ್ತ ವನವಾಸದಲ್ಲಿ ಸಾವಿನ ಸುದ್ದಿ ತಿಳಿದ ತಕ್ಷಣ ರಾಮ ಮತ್ತು ಲಕ್ಷ್ಮಣ ಸೇರಿ, ಪಿಂಡ ಪ್ರಧಾನಕ್ಕೆ ಬೇಕಾದ ಪರಿಕರವನ್ನು ತರಲು ಹೊರಟರು. ಕುಟೀರದಲ್ಲಿ ಸೀತೆ ಒಬ್ಬಳೇ ಇದ್ದಳು. ಆಗ ಅಲ್ಲಿಗೆ ಬಂದ ದಶರಥನ ಆತ್ಮ ಸೀತೆಯಲ್ಲಿ ಹೀಗೆ ಹೇಳಿತು. ನನ್ನ ಪಿಂಡಪ್ರಧಾನದ ಸಮಯ ಸಾಗುತ್ತಿದೆ. ಸಮಯ ಸರಿದು ಹೋದ ಮೇಲೆ ಪಿಂಡಪ್ರಧಾನ ಮಾಡಿದರೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎನ್ನುತ್ತದೆ. ಹಾಗಾಗಿ ಸೀತೆಯೇ ದಶರಥನಿಗೆ ಪಿಂಡ ಪ್ರಧಾನ ಮಾಡಬೇಕು ಅಂತಾ ನಿರ್ಧರಿಸುತ್ತಾಳೆ.

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2

ಈ ವೇಳೆ ಕಾಗೆ, ಗೋವು, ಫಲ್ಗುಣಿ ನದಿ ಮತ್ತು ಪುರೋಹಿತರನ್ನು ಸಾಕ್ಷಿಯಾಗಿರಿಸಿಕೊಂಡು, ಸೀತೆ ಪಿಂಡ ಪ್ರಧಾನ ಮಾಡುತ್ತಾಳೆ. ನಂತರ ರಾಮ ಮತ್ತು ಲಕ್ಷ್ಮಣ ಬಂದ ಮೇಲೆ, ತಾನೇ ದಶರಥರ ಪಿಂಡ ಪ್ರಧಾನ ಮಾಡಿದೆ ಎಂದು ಹೇಳುತ್ತಾಳೆ. ಆದ್ರೆ ರಾಮನಿಗೆ ಸೀತೆಯ ಮಾತನ್ನು ಕೇಳಿ ಆಶ್ಚರ್ಯವಾಗುತ್ತದೆ. ಅವಳ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆಗ ಆಕೆ ತಾನು ಇಲ್ಲೇ ಇದ್ದ ಗೋವು, ಕಾಗೆ , ಫಲ್ಗುಣಿ ನದಿ ಮತ್ತು ಪುರೋಹಿತರ ಸಾಕ್ಷಿಯಾಗಿ ಪಿಂಡ ಪ್ರಧಾನ ಮಾಡಿದ್ದೇನೆ ಎನ್ನುತ್ತಾಳೆ.

ಆಗ ರಾಮ ನಾಲ್ವರಲ್ಲಿಯೂ ಈ ಬಗ್ಗೆ ಕೇಳಿದಾಗ, ಅವರು ಇಲ್ಲ ಸೀತೆ ಪಿಂಡ ಪ್ರಧಾನ ಮಾಡಿಲ್ಲ ಎನ್ನುತ್ತಾರೆ. ಅದಕ್ಕೆ ಸೀತೆ ಕಾಗೆ, ಗೋವಿ, ನದಿ ಮತ್ತು ಪುರೋಹಿತರಿಗೆ ಶಾಪ ನೀಡುತ್ತಾಳೆ. ನೀನು ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ, ನೀನು ಶ್ರೀಮಂತನಾಗುವುದಿಲ್ಲ. ನಿನಗೆ ಖರ್ಚು ಅದೇ ರೀತಿ ಹೆಚ್ಚುತ್ತದೆ ಎಂದು  ಸೀತೆ ಪುರೋಹಿತರಿಗೆ ಶಾಪ ನೀಡುತ್ತಾಳೆ. ನೀನು ಅನ್ನಕ್ಕಾಗಿ ಸತ್ತವರ ಕಾರ್ಯವಾಗುವ ಜಾಗಕ್ಕೇ ಹೋಗಬೇಕು ಎಂದು ಕಾಗೆಗೆ ಶಾಪ ನೀಡುತ್ತಾಳೆ.

ಇನ್ನು ಮಳೆಗಾಲ ಬಂದರೂ ನಿನ್ನ ನದಿ ತುಂಬಿ ತುಳುಕುವುದಿಲ್ಲ. ನೀನು ಒಣಗಿಕೊಂಡೇ ಇರುತ್ತಿಯ ಎಂದು ಫಲ್ಗುಣಿ ನದಿಗೆ ಸೀತೆ ಶಾಪ ನೀಡುತ್ತಾಳೆ. ಅಲ್ಲದೇ ಗೋವನ್ನು ತಾಯಿಯೆಂದು ಭಾವಿಸಿದ್ದೆವು. ಆದ್ರೆ ನೀನು ಸುಳ್ಳು ಹೇಳಿ ತಪ್ಪು ಮಾಡಿದೆ. ಹಾಗಾಗಿ ನೀನು ಆಹಾರಕ್ಕಾಗಿ ಮನೆ ಮನೆಗೆ ಅಲೆಯುವ ಪರಿಸ್ಥಿತಿ ಬರಲಿ. ಎಷ್ಟೇ ಆಹಾರ ಸಿಕ್ಕರೂ, ನೀನು ಅಲಿಯುವಂತಾಗಲಿ ಎಂದು ಸೀತೆ ಶಾಪ ನೀಡುತ್ತಾಳೆ.

- Advertisement -

Latest Posts

Don't Miss