Annigeri News: ಅಣ್ಣಿಗೇರಿ: ಅಣ್ಣಿಗೇರಿಯಲ್ಲಿ ನಿನ್ನೇ ರಾತ್ರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿ ರಿಷಿ ಸಾರಂಗ ಎಂಬುವವರ ಮೇಲೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಡಿ ಓ ಆಗಿರುವ ಪೊಲೀಸ್ ಪೇದೆ, ಮಂಜು ನಾಗಾವಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿನ್ನೇ ರಾತ್ತಿ ಊಟ ಮುಗಿಸಿಕೊಂಡು ನಿಂತಿದ್ದ ರಿಷಿ ಸಾರಂಗ, ಮಂಜು ನಾಗಾವಿಯವರ ವಾಹನದ ಮೇಲೆ ನೀರಿನ ಬಾಟಲ್ ಇಟ್ಟು, ಸ್ನೇಹಿತರ ಜೊತೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ತಮ್ಮ ವಾಹನದ ಮುಂದೆ ಬಂದ ಪೊಲೀಸ್ ಪೇದೆ ಮಂಜು ನಾಗಾವಿ, ನೀರಿನ ಬಾಟಲ್ ಇಟ್ಟಿದ್ದ ರಿಷಿ ಸಾರಂಗರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ರಿಷಿ ಸಾರಂಗ ಕ್ಷಮಿಸಿ ಎಂದು ಹೇಳುವಷ್ಟರಲ್ಲಿ ಮಂಜು ನಾಗಾವಿ ಏಕಾಏಕಿ, ರಿಷಿ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ್ದರ ಪರಿಣಾಮ, ರಿಷಿಗೆ ಕಿವಿಯಲ್ಲಿ ರಕ್ತ ಬಂದಿದೆ. ತಕ್ಷಣ ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಹೋದ ರಿಷಿ ಎಮ್ ಎಲ್ ಸಿ ಮಾಡಿಸಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಂಜು ಸಹ ಆಸ್ಪತ್ರೆಗೆ ಹೋಗಿ ಕೈಗೆ ನೋವಾಗಿದೆ ಎಂದು ಹೇಳಿ, ಆಸ್ಪತ್ರೆಗೆ ಧಾಖಲಾಗಿದ್ದಾರೆ. ವಿಷಯ ತಿಳಿದ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇನ್ನಿತರರು ಕಂದಾಯ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಹಲ್ಲೆ ಖಂಡಿಸಿದ್ದಾರೆ.
ಮಂಜು ನಾಗಾವಿ, ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಸಂಬಂಧಿ ಎಂದು ಹೇಳಿಕೊಂಡು ಅಣ್ಣಿಗೇರಿಯಲ್ಲಿ ದರ್ಪ ಮೆರೆಯುತ್ತಿದ್ದಾರೆ ಎಂದು ಅಣ್ಣಿಗೇರಿ ಸಾರ್ವಜನಿಕರು ಆರೋಪಿಸಿದ್ದಾರೆ. ಅಣ್ಣಿಗೇರಿಯಲ್ಲಿ ಮಂಜು ನಾಗಾವಿ ಹೆದರಿಕೆ ಹುಟ್ಟಿಸಿದ್ದು, ಸುಖಾ ಸುಮ್ಮನೆ ಬಲ ಪ್ರಯೋಗ ಮಾಡುತ್ತಿದ್ದಾರೆ ಎನ್ನಲಾಗಿದೆ. ದಕ್ಷ ಪೊಲೀಸ್ ವರಿಷ್ಟಾಧಿಕಾರಿಗಳಾಗಿರುವ ಡಾ. ಗೋಪಾಲ ಬ್ಯಾಕೋಡರವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಹೋದರೆ, ಅಣ್ಣಿಗೇರಿ ಠಾಣೆಯ ಗೌರವ ಹರಾಜುವಾಗುವದರಲ್ಲಿ ಎರಡು ಮಾತಿಲ್ಲ.
ಪೊಲೀಸನ ದರ್ಪಕ್ಕೆ ಸಿಡಿದೆದ್ದ ಅಣ್ಣಿಗೇರಿ ಜನ. ಪೊಲೀಸ್ ಠಾಣೆಗೆ ಮುತ್ತಿಗೆ.
ಜನಸ್ನೇಹಿ ಠಾಣೆಯಾಗಿರುವ ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿಯ ದರ್ಪಕ್ಕೆ ಅಣ್ಣಿಗೇರಿ ಜನ ಸಿಡಿದಿದ್ದಾರೆ. ನಿನ್ನೆ ರಾತ್ರಿ ಕಂದಾಯ ಇಲಾಖೆಯ ಅಧಿಕಾರಿ ರಿಷಿ ಸಾರಂಗಿ ಮೇಲೆ ಪೇದೆ ಮಂಜು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿ, ಮೇಲಿಂದ ಮೇಲೆ ಅಮಾಯಕರಿಗೆ ತೊಂದರೆ ನೀಡುತ್ತಾರೆ ಎಂದು ಅಣ್ಣಿಗೇರಿ ಜನ ಆರೋಪಿಸಿದ್ದಾರೆ.
ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಪೇದೆ ಮಂಜು ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಮಧ್ಯೆ ಖಾಸಗಿ ಪತ್ರಿಕೆಯ ವರದಿಗಾರರು ಪ್ರತಿಭಟನೆಯ ವಿಡಿಯೋ ಮಾಡಲು ಹೋದಾಗ, ವಿಕಾಸ ನಾಯಕವಾಡಿ ಎಂಬಾತ, ಮೊಬೈಲ್ ಕಸಿದುಕೊಂಡು ದರ್ಪ ಮೆರೆದಿದ್ದಾನೆ.
ಆಕ್ರಮ ಚಟುವಟಿಕೆ ತಡೆಯಬೇಕಾದ ಅಣ್ಣಿಗೇರಿ ಠಾಣೆಯ ಪೊಲೀಸರ ಪೈಕಿ ಕೆಲವರು ಊರಲ್ಲಿ ಹಪ್ತಾ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಜನಸ್ನೇಹಿ ಠಾಣೆಯಾಗಿದ್ದ ಅಣ್ಣಿಗೇರಿ ಠಾಣೆಯ ಗೌರವ ಕಡಿಮೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಧಾರವಾಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!
ಉಂಡ ಮನೆಗೆ ದ್ರೋಹ ಜ್ಯುವೆಲ್ಲರಿ ಶಾಪ್ನಿಂದ ಕೆಜಿ ಕೆಜಿ ಚಿನ್ನ, ಬೆಳ್ಳಿ ಕದ್ದ ಮನೆ ಕೆಲಸದಾಳು




