ಹೊಸದಿಲ್ಲಿ:ಟಿ20 ನಾಯಕನಾಗಿ ಕಣಕ್ಕಿಳಿದ ರಿಷಭ್ ಪಂತ್ ಅನಗತ್ಯ ದಾಖಲೆ ಬರೆದಿದ್ದಾರೆ.
ಭಾರೀ ಮೊತ್ತ ಪೇರಿಸಿದ ಹೊರತಾಗಿಯೂ ಪಂತ್ ನಾಯಕತ್ವ ಅಂದುಕೊಂಡಂತೆ ಸಾಗಲಿಲ್ಲ.
ನಾಯಕನಾಗಿ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿ ಅವರ ಕ್ಲಬ್ ಸೇರಿದರು. ನಾಯಕನಾಗಿ ಮೊದಲ ಪಂದ್ಯದಲ್ಲೆ ಸೋತ ಎರಡನೆ ನಾಯಕ ಎನಿಸಿದರು.
2017ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂದು ನಾಯಕನಾಗಿ ಡೆಬ್ಯು ಮಾಡಿದ್ದ ವಿರಾಟ್ ಕೊಹ್ಲಿ 7 ವಿಕೆಟ್ ಅಂತರದಿಂದ ಸೋತಿತ್ತು. ನಂತರ ವೈಟ್ ಬಾಲ್ ನಲ್ಲಿ ವಿರಾಟ್ ಕೊಹ್ಲಿ ಯಶಸ್ವಿ ನಾಯಕರಾಗಿ ಹೊರಹೊಮ್ಮಿದರು.
ಭಾರತ ನೀಡಿದ 211 ರನ್ ಗುರಿಯನ್ನು ದ,ಆಫ್ರಿಕಾ ಡಸೆನ್ ಹಾಗೂ ಡೇವಿಡ್ ಮಿಲ್ಲರ್ ಸಹಾಯದಿಂದ ಗೆದ್ದು ಟಿ20 ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆಯಿತು.
ಭಾರತಕ್ಕೆ ಗೆಲ್ಲಲು ಸಾಕಷ್ಟು ಅವಕಾಶವಿತ್ತು 16ನೇ ಓವರ್ನಲ್ಲಿ ಡಸೆನ್ ಕೊಟ್ಟ ಸುಲಭ ಕ್ಯಾಚ್ ಅನ್ನ ಶ್ರೇಯಸ್ ಐಯ್ಯರ್ ಕೈಚೆಲ್ಲಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು.