Wednesday, September 11, 2024

Latest Posts

ರಾಕ್ ಲೈನ್ ವೆಂಕಟೇಶ್ ಬಿಡುಗಡೆ ಮಾಡಿದರು “ಯಾರಿಗೆ ಬೇಕು ಈ ಲೋಕ” ಚಿತ್ರದ ಟೀಸರ್..!

- Advertisement -

ಬಿ.ಶ್ರೀನಿವಾಸರಾವ್ ಹಾಗೂ ರೋಶ್ನಿ ನೌಡಿಯಲ್ ನಿರ್ಮಿಸಿರುವ, ಎಂ.ರಮೇಶ್ ಮತ್ತು ಗೋಪಿ ಜಂಟಿಯಾಗಿ ನಿರ್ಮಿಸಿರುವ “ಯಾರಿಗೆ ಬೇಕು ಈ ಲೋಕ” ಚಿತ್ರದ ಟೀಸರ್ A2 Music ಮೂಲಕ ಬಿಡುಗಡೆಯಾಗಿದೆ. ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರೀಕರಣ ಮುಕ್ತಾಯವಾಗಿದ್ದು, ಮೊದಲಪ್ರತಿ ಸಹ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.‌

ನಿರ್ದೇಶಕರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಲ್ಕು ಹಾಡುಗಳಿದ್ದು, ಮಹಿತ್ ನಾರಾಯಣ್ ಸಂಗೀತ ನೀಡಿದ್ದಾರೆ.‌ ಹಿನ್ನೆಲೆ ಸಂಗೀತ ಶ್ರೀವಸಂತ್ ಅವರದು. ಆನಂದ್ ಛಾಯಾಗ್ರಹಣ , ಅಲ್ಟಿಮೇಟ್ ಶಿವು, ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಹಾಗೂ ನರೇಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ರಾಜ್ ಶರಣ್ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಲೋಗನಾಥನ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ‌.

ಆರ್ಯವರ್ಧನ್ ನಾಯಕರಾಗಿ ನಟಿಸಿರುವ “ಯಾರಿಗೆ ಬೇಕು ಈ ಲೋಕ” ಚಿತ್ರದ ನಾಯಕಿಯರಾಗಿ ವರ್ಷ ವಿಶ್ವನಾಥ್, ಪಾವನಿ, ಪ್ರಿಯಾಂಕ ರೆವರಿ ಹಾಗೂ ಅಂಕಿತ ಅಭಿನಯಿಸಿದ್ದಾರೆ.

- Advertisement -

Latest Posts

Don't Miss