ದಾಖಲೆಗಳನ್ನ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ಓಪನರ್, ಈಗ ಮತ್ತೊಂದು ದಾಖಲೆ ಬರೆಯುವುದಕ್ಕೆ ಹಣಿಯಾಗಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿರುವ ರೋಹಿತ್ ಶರ್ಮಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ.
ಹೌದು.. ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಪರ್ಫಾರ್ಮೆನ್ಸ್ ನೀಡ್ತಿದ್ದಾರೆ. ಆಡಿರುವ 8 ಪಂದ್ಯಗಳಲ್ಲೇ 92.42ರ ಸರಾಸರಿಯಲ್ಲಿ 647 ರನ್ ಸಿಡಿಸಿ, ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ಇಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನ ಎದುರಿಸುತ್ತಿದ್ದು, ರೋಹಿತ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇಂದಿನ ಪಂದ್ಯದಲ್ಲಿ ರೋಹಿತ್ 27 ರನ್ ಗಳಿಸಿದ್ರೆ, ಹೊಸ ದಾಖಲೆ ನಿರ್ಮಾಣವಾಗುತ್ತೆ.
ಯಸ್.. ಈ ಹಿಂದೆ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಟೂರ್ನಿ ಒಂದರಲ್ಲಿ 673 ಕಲೆ ಹಾಕಿದ್ದರು. ಸದ್ಯ ರೋಹಿತ್ ಖಾತೆಯಲ್ಲಿ 647 ರನ್ ಗಳಿದ್ದು, ಇನ್ನು 27 ರನ್ ಗಳಿಸಿದಲ್ಲಿ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿ ಒಂದರಲ್ಲಿ, ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಬ್ಯಾಟ್ಸ್ ಮನ್ ಅನ್ನೋ ಹೆಗ್ಗಳಿಕೆಯನ್ನ ತಮ್ಮದಾಗಿಸಿಕೊಳ್ಳಲಿದ್ದಾರೆ.