- Advertisement -
ಸೌಥಾಂಪ್ಟನ್:5ನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಇದೀಗ ಟೀಮ್ ಇಂಡಿಯಾ ಟಿ20 ಸರಣಿಗೆ ಸಜ್ಜಾಗಿದೆ.
ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡ ಆಘಾತ ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯ ಆಡುವುದು ಅನುಮಾನದಿಂದ ಕೂಡಿದೆ. ಕೋವಿಡ್ ನಿಂದ ಚೇತರಿಸಿಕೊಂಡಿದ್ದ ಹಿಟ್ ಮ್ಯಾನ್ ಯಾಕೆ ಆಡುತ್ತಿಲ್ಲ ಅನ್ನೋದರ ಬಗ್ಗೆ ಬಿಸಿಸಿಐ ಕೂಡ ಮಾಹಿತಿ ನೀಡಿಲ್ಲ.
ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ ಮತ್ತು ಬುಮ್ರಾ ಆಡುತ್ತಿಲ್ಲ ಅನ್ನೋದು ಮಾಹಿತಿ ಲಭ್ಯವಾಗಿದೆ.
ಏಕೈಕ ಟೆಸ್ಟ್ ನಲ್ಲಿ ಭಾರತವನ್ನು ಸೋಲಿಸಿದ್ದ ಆಂಗ್ಲರು ಟಿ20 ಸರಣಿಯಲ್ಲೂ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ. ಟಿ20 ಆವೃತ್ತಿಯಲ್ಲಿ ಇದುವರೆಗೂ ಭಾರತ –ಇಂಗ್ಲೆಂಡ್ 19 ಬಾರಿ ಕಾದಾಟ ನಡೆಸಿವೆ.ಇದರಲ್ಲಿ ಭಾರತ 10 ಬಾರಿ ಗೆದ್ದರೆ ಇಂಗ್ಲೆಂಡ್ 9 ಬಾರಿ ಗೆದ್ದಿದೆ.
- Advertisement -