- Advertisement -
ದುಬೈ:ವಿಕೆಟ್ ಕೀಪರ್ ರಿಷಬ್ ಪಂತ್ಗೆ ನಾಯಕ ರೋಹಿತ್ ಶರ್ಮಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಭಾನುವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ವಿಕೆಟ್ ರಿಷಬ್ ಪಂತ್ ಕೇವಲ 14 ರನ್ ಗಳಿಸಿ ಔಟ್ ಆದರು. ಐದನೆ ಕ್ರಮಾಂಕದಲ್ಲಿ ಬಂದಿದ್ದ ಪಂತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು.
ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ಗೆ ಅವಕಾಶ ನೀಡಲಾಗಿತ್ತು. ಎಡಗೈ ಬ್ಯಾಟರ್ ಅನ್ನೋ ಕಾರಣಕ್ಕೆ ಸ್ಥಾನ ಪಡೆದ ಪಂತ್ 12 ಎಸೆತಗಳಲ್ಲಿ 14 ರನ್ ಗಳಿಸಿ ಸುಲಭವಾಗಿ ಶಾದಾಬ್ ಎಸೆತದಲ್ಲಿ ಆಸೀಫ್ ಅಲಿಗೆ ಕ್ಯಾಚ್ ನೀಡಿ ಹೊರ ನಡೆದರು.
ಒಂದು ಬದಿಯಲ್ಲಿ ವಿರಾಟ್ ಚೆನ್ನಾಗಿ ಆಡುತ್ತಿದ್ದರೆ ಯಾರು ಒಳ್ಳೆಯ ಸಾಥ್ ಕೊಡಲಿಲ್ಲ. ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು.
ಪೆವಲಿಯನ್ಗೆ ಪಂತ್ ಬರುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಫುಲ್ ಕ್ಲಾಸ್ ತೆಗೆದುಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
- Advertisement -