ಬೆಂಗಳೂರು : 19 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಹುಲ್(Rowdysheater Rahul)ಕಾಲಿಗೆ ಗುಂಡು ಹಾರಿಸಿ ಪೊಲೀಸರು(police) ಬಂಧಿಸಿದ್ದಾರೆ. ರಾಹುಲ್ ನ ಮೇಲೆ ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಇಂದು ಬೆಳಗ್ಗೆ ಖಚಿತವಾದ ಮಾಹಿತಿ ಆಧಾರದ ಮೇಲೆ ಹನುಮಂತನಗರದ ಪೊಲೀಸರು ರಾಹುಲ್ ಬಂಧನಕ್ಕೆ ತೆರಳಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಸಬ್ ಇನ್ಸ್ ಪೆಕ್ಟರ್(Sub Ins pector) ಬಸವರಾಜ ಪಾಟೀಲ್(basavaraj patil) ಗುಂಡು ಹಾರಿಸಿದ್ದಾರೆ. ಕೋಣನಕುಂಟೆಯ ನಾರಾಯಣನಗರದಲ್ಲಿ ಇದು ಬೆಳಗಿನ ಜಾವ 4.30ರ ಸುಮಾರಿಗೆ ಫೈರಿಂಗ್ ನಡೆದಿದೆ. ಆರೋಪಿ ರಾಹುಲ್ ವಿರುದ್ಧ ನಗರದ ದಕ್ಷಿಣ ವಿಭಾಗದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಹಾಗೂ ರಾಹುಲ್ ಬಂಧನಕ್ಕಾಗಿ ವಾರೆಂಟ್ ಸಹ ಹೊರಡಿಸಲಾಗಿತ್ತು. ಪೊಲೀಸರು ರಾಹುಲ್ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿಯನ್ನು ಆಧರಿಸಿ ರಾಹುಲ್ ನನ್ನು ಇದು ಬೆಳಗ್ಗೆ ಪೊಲೀಸರು ಬಂಧಿಸಲು ಹೋದಾಗ ಈ ವೇಳೆ ಪೇದೆ ನಿಂಗಪ್ಪ(Ningapaa) ಮತ್ತು ಸಬ್ಇನ್ಸ್ಪೆಕ್ಟರ್ ಬಸವರಾಜ ಪಾಟೀಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದ, ಈ ವೇಳೆ ಪೊಲೀಸರು ರಾಹುಲ್ ನ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.