- Advertisement -
ಬೆಂಗಳೂರು: ಪೊಲೀಸರ ಮೇಲೆಯೇ ಗೂಂಡಾಗಿರಿ ನಡೆಸಿರುವಂತಹ ಪ್ರಕರಣ ಯಲಹಂಕದ ಚಿಕ್ಕಬೆಟ್ಟಹಳ್ಳಿ ಯಲ್ಲಿ ಕಂಡುಬಂದಿದೆ. ಡಿಸೆಂಬರ್ 7ರಂದು ರಾತ್ರಿ ಕಾರ್ಯನಿರತ ಪೊಲೀಸರ ಮೇಲೆ ಇಬ್ಬರ ಪುಂಡರು ಕೊರಳಪಟ್ಟಿ ಹಿಡಿದು ತಲೆಗೆ ಬಾರಿಸಿದ್ದಾರೆ, ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಪೊಲೀಸರು ಮಾಸ್ ಹಾಕದೆ ಇರುವುದನ್ನು ಪ್ರಶ್ನಿಸಿದ್ದಕ್ಕೆ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆಸಿಫ್ ಎಂಬಾತ ಯಾವ ಪೊಲೀಸ್ ಸ್ಟೇಷನ್ ನೆಂದು ಇಬ್ಬರು ಪುಂಡರು ಪ್ರಶ್ನಿಸಿದ್ದಾರೆ. ಈಗ ಚಿಕ್ಕಬೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಪುಂಡರನ್ನು ಪೊಲೀಸರು ಬಂಧಿಸಿ, ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -

