ಸಿನಿಮಾ : RRR ಸಿನಿಮಾ ಜನವರಿ 7ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲು ಸಿದ್ಧವಾಗಿತ್ತು. ಆದರೆ ಇದೀಗ ಸಿನಿಮಾ ರಿಲೀಸ್ ಡೇಟ್(Release date) ಅನ್ನು ಮುಂದೂಡಲಾಗಿದೆ. ಈ ಸಿನಿಮಾ 400 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ, ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಆದಂತಹ ರಾಮಚರಣ್(Ramacharan)ಹಾಗೂ ಜೂನಿಯರ್ NTR ಅಭಿನಯಿಸಿದ್ದಾರೆ. ಅದೇ ರೀತಿ ಬಾಲಿವುಡ್(Bollywood) ನಟಿ ಆದಂತಹ ಅಲಿಯ ಭಟ್ ಹಾಗೂ ತಮಿಳಿನ ಅಜಯ್ ದೇವಗನ್ (Ajay Devgan) ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಎಸ್ ಎಸ್ ರಾಜಮೌಳಿ(S S Rajamouli) ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು ತೆಲುಗು,ಕನ್ನಡ, ತಮಿಳ್, ಹಿಂದಿ, ಮಲಯಾಳಂ, ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರಿ ಸದ್ದನ್ನು ಮಾಡುತ್ತಿದ್ದು , ಜನವರಿ 7 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾದ ರೂಪಾಂತರಿ ಆದಂತಹ ಒಮಿಕ್ರೋನ್ ಹೆಚ್ಚಾಗುತ್ತಿರುವ ಕಾರಣ, ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಥಿಯೇಟರ್ ಗಳಲ್ಲಿ 50:50 ರೂಲ್ಸ್ ಜಾರಿಗೆ ತಂದಿದೆ. ಹಾಗೂ ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿರುವುದು, ಇವೆಲ್ಲದರ ಕಾರಣದಿಂದಾಗಿ ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದು ಒಳ್ಳೆಯದಲ್ಲ ಎಂದು ಸಿನಿಮಾ ಟೀಮ್(Cinema Team) ನಿರ್ಣಯ ಮಾಡಿದ್ದು ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಸಿನಿಮಾ ತಂಡಇನ್ನೂ ಪ್ರಕಟಿಸಿಲ್ಲ. ಈ ಸಿನಿಮಾ ಎಪ್ರಿಲ್ ನಲ್ಲಿ ರಿಲೀಸ್ ಮಾಡಬಹುದು ಎಂಬುವ ಊಹಾಪೋಹಗಳು ಈಗ ಹರಿದಾಡುತ್ತಿದೆ.

