Sunday, September 8, 2024

Latest Posts

Hdk ಬಹಿರಂಗ ರಾಮನಗರ & ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 26 ಕೋಟಿ ದುರ್ಬಳಕೆ..!

- Advertisement -

ಹಾಸನ : ರಾಮನಗರ (Ramanagara) ಮತ್ತು ಮಂಡ್ಯದ ನಗರಾಭಿವೃದ್ಧಿ ಪ್ರಾಧಿಕಾರ(Mandya Urban Development Authority)ಗಳಲ್ಲಿ 26 ಕೋಟಿ ರೂ. ಹಣವನ್ನು ದುರ್ಬಳಕೆ ಮಾಸಡಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಗಂಭೀರ ಆರೋಪ ಮಾಡಿದರು. ಹಾಸನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಮನಗರ ಕ್ಷೇತ್ರದ ನಗರ ಪ್ರದೇಶದ ಜನರ ಸಮಸ್ಯೆಗಳ  ಬಗ್ಗೆ ಚರ್ಚೆ ಮಾಡಲು ಹೋದಾಗ ಈ ಹಗರಣದ ಮಾಹಿತಿ ಸಿಕ್ಕಿತು. ರಾಮನಗರ ಮತ್ತು ಮಂಡ್ಯ ಪ್ರಾಧಿಕಾರದಲ್ಲಿ ಇಷ್ಟು ಪ್ರಮಾಣಾ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು ಎಂದರು. ಬ್ಯಾಂಕ್ʼನಲ್ಲಿ ಠೇವಣಿ ಮಾಡಿದ್ದೇವೆ ಎಂದು ಹೇಳಿಕೊಂಡು ಹಣ ಹೊಡೆದಿದ್ದಾರೆ. ಇದು ಯಾರಿಂದ ಆಗಿದೆ? ಈ ಹಣ ಎಲ್ಲಿ ಹೋಗಿದೆ? ಯಾರು ಬಳಕೆ ಮಾಡಿದ್ದಾರೆ? ಎನ್ನುವುದು ತನಿಖೆ ನಡೆದರೆ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾಂಗ್ರೆಸ್ ನಾಯಕರು (Congress leaders) ಈಗಿನ ಬಿಜೆಪಿ ಸರಕಾರವನ್ನು ಲೂಟಿ ಸರಕಾರ (looting BJP government) ಎಂದು ಕರೆಯುತ್ತಿದ್ದಾರೆ. ಆದರೆ ಈ  ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರೂ ಈವರೆಗೆ ಒಂದೇ ಒಂದು ರೂಪಾಯಿ ಹಣ ವಾಪಸ್ ಬಂದಿಲ್ಲ. ಈ ವಿಷಯವನ್ನು ನಾನು ಸಿದ್ದರಾಮಯ್ಯ (Siddaramaiah) ಅವರ ಸರಕಾರವಿದ್ದಾಗಲೂ ಗಮನಕ್ಕೆ ತಂದಿದ್ದೆ. ರಾಜ್ಯದ ವಿವಿಧ ಇಲಾಖೆಗಳ ಹಣವನ್ನು ಖಾಸಗಿ ಬ್ಯಾಂಕ್ʼಗಳಲ್ಲಿ ಠೇವಣಿ (Deposit in Private Bankʼs) ಇಡಲಾಗಿದ್ದು, ಆ ಹಣವನ್ನು ಖಜಾನೆಗೆ ವಾಪಸ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದೆ. ಆದರೆ ಅವರು ಏನನ್ನು ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರು ದೂರಿದರು. ಅಂದು ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರಾಗಿದ್ದವರಿಗೆ, ಆರೋಪಕ್ಕೆ ಗುರಿಯಾದವನಿಗೆ ಮತ್ತೆ ಉತ್ತಮ ಇಲಾಖೆಯಲ್ಲಿ ದೊಡ್ಡ ದೊಡ್ಡ ಹುದ್ದೆ ನೀಡಲಾಯಿತು. ರಾಜ್ಯದಲ್ಲಿ ಸರಕಾರದ ಹಣ ಯಾವ ರೀತಿಯಲ್ಲಿ ಲೂಟಿ ಆಗುತ್ತಿದೆ ಎನ್ನುವುದಕ್ಕೆ ಇದೊಂದು ಸಾಕ್ಷಿ ಎಂದು ಅವರು ಹೇಳಿದರು.

ಇನ್ನು ರಾಜ್ಯದ ಬಿಜೆಪಿ ಸರಕಾರದ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಈ ಸರಕಾರ ಯಾವ ರೀತಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನರೇಂದ್ರ ಮೋದಿ (Narendra Modi) ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ, ಎಲ್ಲವನ್ನೂ ನಿಲ್ಲಿಸಿದ್ದೇವೆ ಎನ್ನುತ್ತಾರೆ. ಆದರೆ ಎಲ್ಲವೂ ಹೇಗೆ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ವರ್ಷ ಐವತ್ತು ಸಾವಿರ ಕೋಟಿ ರೂ ಸಾಲಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಜಿಎಸ್ ಟಿಯಲ್ಲಿ ನಮ್ಮ ಪಾಲನ್ನು ಕೊಡದ ಕೇಂದ್ರ ಸರಕಾರ ಸಾಲ ಮಾಡಿ ಎಂದು ರಾಜ್ಯಕ್ಕೆ ಹೇಳುತ್ತಿದೆ. ರಾಜ್ಯದಲ್ಲಿ ಕೇಂದ್ರದಲ್ಲಿ ಅರ್ಥಿಕ ಶಿಸ್ತು ಕಾಣುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

- Advertisement -

Latest Posts

Don't Miss