Mysore : ಅನ್ಯ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬ ಆರ್ ಟಿ ಪಿಸಿಆರ್ ಟೆಸ್ಟ್ ವರದಿಯನ್ನೇ ತಿದ್ದಿ ಸಿಕ್ಕಿ ಹಾಕಿಕೊಂಡಿರುವ ಪ್ರಸಂಗ ನಡೆದಿದೆ.
ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ವಿದೇಶ ಹಾಗೂ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೂ ಕೂಡ ಟಫ್ ರೂಲ್ಸ್ ಜಾರಿ ಮಾಡಲಾಗಿತ್ತು.
ಆದರೆ, ಇಲ್ಲೊಬ್ಬ ವ್ಯಕ್ತಿ ಕೋವಿಡ್ ವರದಿಯನ್ನೇ ತಿದ್ದಿಕೊಂಡು ರಾಜ್ಯಕ್ಕೆ ಪ್ರವೇಶ ಮಾಡುವ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಆರ್ ಟಿ ಪಿಸಿಆರ್ ಟೆಸ್ಟ್ (RT PCR ) ವರದಿ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಹೀಗಾಗಿಯೇ ವ್ಯಕ್ತಿಯೊಬ್ಬ ಅದನ್ನು ತಿದ್ದಿಕೊಂಡು ಬಂದಿದ್ದಾನೆ. ಕಾರಿನಲ್ಲಿ ಮೂವರು ರಾಜ್ಯಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದರು. ಒಂದೇ ವರದಿಯನ್ನು ಇಬ್ಬರ ಹೆಸರಿಗೆ ಮಾಡಿಕೊಂಡು ಬರಲಾಗಿತ್ತು. ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿ, ವರದಿಯನ್ನು ಸ್ಕ್ಯಾನ್ ಮಾಡಿದಾಗ ಇದು ಬೆಳಕಿಗೆ ಬಂದಿದೆ. ಒಂದೇ ವರದಿಯನ್ನು ಎಡಿಟ್ ಮಾಡಿ ಇಬ್ಬರ ಹೆಸರಿನಲ್ಲಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರನ್ನು ಮರಳಿ ಕಳುಹಿಸಲಾಗಿದೆ. ಸದ್ಯ ರಾಜ್ಯ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಆರ್ ಟಿ ಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.