ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ (Ukraine) ವಿರುದ್ಧ ಯುದ್ಧ ಘೋಷಿಸಿದ್ದಾರೆ (Declared war). ರಷ್ಯಾದ ವಾಯುಯಾನ ಅಧಿಕಾರಿಗಳು (Aviation authorities) ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ. ಪೂರ್ವ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. ರಷ್ಯಾದ ಕಡೆಯಿಂದ ಯುದ್ಧದ ಬೆದರಿಕೆ ಹೆಚ್ಚಾಗುತ್ತಿರುವಂತೆ ಉಕ್ರೇನ್‌ನ ಅಧ್ಯಕ್ಷ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದು, ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ದೇಶದ ಜನತೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿ, ದೇಶವು ರಷ್ಯಾಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬ ರಷ್ಯಾ ಆರೋಪವನ್ನು ನಿರಾಕರಿಸಿದರು, ರಷ್ಯಾದ ಆಕ್ರಮಣವು ಹತ್ತಾರು ಸಾವಿರ ಜೀವಗಳನ್ನು ಕಳೆದುಕೊಳ್ಳುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಪೂರ್ವ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಪ್ರಾರಂಭಿಸುವ ನಿರ್ಧಾರವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸುತ್ತಿದ್ದಂತೆ ಪರಿಸ್ಥಿತಿ ದೊಡ್ಡ ಬಿಕ್ಕಟ್ಟಿನತ್ತ ತಿರುಗುವತ್ತ ಸಾಧ್ಯತೆಯಿದೆ ಎಂದು ಆತಂಕಪಟ್ಟಿರುವ ಭಾರತ (India), ರಷ್ಯಾ ಮತ್ತು ಉಕ್ರೇನ್ ನಡುವಣ ಆತಂಕವನ್ನು ಕಡಿಮೆಮಾಡಿಕೊಳ್ಳುವಂತೆ ಕರೆ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ರಷ್ಯಾ ದಾಳಿಯ ಬಗ್ಗೆ ಮಾತನ್ನಾಡಿದ್ದಾರೆ. ಆದರೆ ರಷ್ಯಾದಿಂದ ಉಕ್ರೇನ್ ರಕ್ಷಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ” ಎಂದಿದ್ದಾರೆ. ಜೊತೆಗೆ ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸುವಂತೆ ವಿಶ್ವಸಂಸ್ಥೆಗೆ ಅವರು ಮನವಿ ಮಾಡಿದ್ದಾರೆ. ಉಕ್ರೇನ್‌ನ ವಾಯು ನೆಲೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ತಟಸ್ಥಗೊಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ. ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ರಷ್ಯಾದ ಹೆಲಿಕಾಪ್ಟರ್ (Russian helicopter) ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. “ಉಕ್ರೇನ್‌ನಲ್ಲಿನ ಭೀಕರ ಘಟನೆಗಳಿಂದ ದಿಗ್ಭ್ರಮೆಗೊಂಡಿರುವುದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಈ ಅಪ್ರಚೋದಿತ ದಾಳಿಯನ್ನು ಪ್ರಾರಂಭಿಸುವ ಮೂಲಕ ರಕ್ತಪಾತ ಮತ್ತು ವಿನಾಶದ ಮಾರ್ಗವನ್ನು ಆರಿಸಿಕೊಂಡಿದ್ದಾರೆ” ಎಂದಿದ್ದಾರೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಉದ್ದೇಶ ಉಕ್ರೇನಿಯನ್ ರಾಜ್ಯವನ್ನು ನಾಶಪಡಿಸುವುದಾಗಿದೆ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವಾಲಯ ಹೇಳಿದೆ. ಯುನೈಟೆಡ್ ಸ್ಟೇಟ್ ಮಿತ್ರ ರಾಷ್ಟ್ರಗಳಿಂದ ತೀವ್ರ ನಿರ್ಬಂಧ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿರುವುದಾಗಿ ಮಾಸ್ಕೋ ಸ್ಟಾಕ್ ಎಕ್ಸ್‌ಚೇಂಜ್ (Moscow Stock Exchange) ತಿಳಿಸಿದೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವ ರಷ್ಯಾದ ನಿರ್ಧಾರವನ್ನು ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಅಲೆಕ್ಸೆವಿಚ್ ನೆಬೆನ್ಜ್ಯಾ ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಪುಟಿನ್ ಹೇಳಿದ್ದಾರೆ, ಉಕ್ರೇನ್ ಜನತೆ ದೇಶವನ್ನು ನಡೆಸುವವರನ್ನು ಮುಕ್ತವಾಗಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದರು.

