International News: ರಷ್ಯಾದ ಸೇನೆ ವಂಚನೆಯಿಂದ ಸೇನೆಗೆ ಸೇರಿಸಿಕೊಂಡಿದ್ದ ಹೈದರಾಬಾದ್‌ನ ಯುವಕ, ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದಾನೆ. ಈ ಬಗ್ಗೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ.
ಹೈದರಾಬಾದ್ ನಿವಾಸಿ ಮೊಹಮದ್ ಅಫ್ಸಾನ್ ಎಂದು ಹೇಳಲಾಗಿದ್ದು, ಈತ ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ, ಹೇಗೆ ಸಾವನ್ನಪ್ಪಿದ್ದಾನೆಂದು ಇದುವರೆಗೂ ಗೊತ್ತಾಗಲಿಲ್ಲ. ಇನ್ನು ಈತನ ಶವವನ್ನು ಭಾರತಕ್ಕೆ ತರುವಂತೆ, ಈತನ ಕುಟುಂಬಸ್ಥರು ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಶವವನ್ನು ಭಾರತಕ್ಕೆ ತರಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಅಫ್ಸಾನ್ ಅವರನ್ನು ರಷ್ಯಾ ತನ್ನ ಸೇನೆಗೆ ಸೇರಿಸಿಕೊಂಡಿತ್ತು. ಆದರೆ ಇದು ಒತ್ತಾಯ ಪೂರ್ವಕವಾಗಿ ಮಾಡಲಾಗಿದ್ದ ಕಾರ್ಯ ಎನ್ನಲಾಗಿದೆ. ಅಫ್ಸಾನ್ ರಷ್ಯಾ ಟ್ರಿಪ್‌ಗೆ ಹೋದಾಗ, ಅಲ್ಲಿ ವಂಚನೆಯಿಂದ ಅವರನ್ನು ಪುಸಲಾಯಿಸಿ, ಸೇನೆಗೆ ಸೇರಿಸಿಕೊಂಡು, ಯುದ್ಧಕ್ಕೆ ಕಳಿಸಿದ್ದಾರೆಂಬ ಮಾಹಿತಿ ಇದೆ.
ಇನ್ನೊಂದೆಡೆ ಈ ಗುಂಪಲ್ಲಿ 20ಕ್ಕೂ ಹೆಚ್ಚು ಭಾರತೀಯ ಯುವಕರಿದ್ದು, ಅವರು ಉದ್ಯೋಗ ನಿಮಿತ್ತವಾಗಿ ರಷ್ಯಾಗೆ ತೆರಳಿದ್ದು. ಅಲ್ಲಿ ಈ ಯುವಕರನ್ನು ರಷ್ಯಾ ತನ್ನ ಸೇನೆಗೆ ಸೇರಿಸಿಕೊಂಡು, ಯುದ್ಧ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಆ ಯುವಕರೇ ಆರೋಪಿಸಿ, ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇವರನ್ನು ಬಿಡುಗಡೆಗೊಳಿಸುವಂತೆ ವಿದೇಶಾಂಗ್ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಲಾಗಿದೆ.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ