Friday, October 24, 2025

Latest Posts

February 11ಕ್ಕೆ S S ರವಿಗೌಡ – ದಿವ್ಯ ಸುರೇಶ್ ಅಭಿನಯದ “ರೌಡಿ ಬೇಬಿ” ಚಿತ್ರ ತೆರೆಗೆ

- Advertisement -

ಸಿನಿಮಾ : ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ “ರೌಡಿ ಬೇಬಿ” ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು.
ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾವು ಮೊದಲ ಸಲ ನಮ್ಮೊಳಗಾದ ಪ್ರೀತಿಯನ್ನು ಮರೆಯುವುದಕ್ಕಾಗಲ್ಲ. ಅನ್ನುತ್ತೇವೆ. ಆದರೆ ನನ್ನ ಪ್ರಕಾರ
ನೀವು ಲವ್ ಬ್ರೇಕಪ್ ಆದರೆ ಎರಡು, ಮೂರು ಮತ್ತೇಷ್ಟೇ ಸಲ ಪ್ರೀತಿಸಿ, ಪ್ರೀತಿ ಪ್ರೀತಿನೇ. ಅದರಲ್ಲಿ ಏನು ಬದಲಾವಣೆ ಇಲ್ಲ‌. ಇದನ್ನು ಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಇದೇ ಹನ್ನೊಂದರಂದು ಚಿತ್ರ ತೆರೆಗೆ ಬರಲಿದೆ. ಚಿತ್ರ ಅಂದುಕೊಂಡತೆ ಮೂಡಿಬರಲು ಚಿತ್ರತಂಡದ ಸಹಕಾರ ಸಾಕಷ್ಟಿದೆ ಎಂದರು ನಿರ್ದೇಶಕ Epuru ಕೃಷ್ಣ.

ನನಗೆ ಕೃಷ್ಣ ಅವರು ಹೇಳಿದ ಕಥೆ ಇಷ್ಟವಾಯಿತು. ಕೃಷ್ಣ ಕಥೆ ಹೇಳಿದಷ್ಟೇ ಚೆನ್ನಾಗಿ ಸಿನಿಮಾವನ್ನು ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎನ್ನುತ್ತಾರೆ ನಾಯಕ ಎಸ್ ಎಸ್ ರವಿಗೌಡ.

ಚಿತ್ರದ ಹೆಸರೇ ಹೇಳುವಂತೆ “ರೌಡಿ ಬೇಬಿ” ಯ ಪಾತ್ರ ನನ್ನದು. ಕಾಲೇಜಿನಲ್ಲಿ ಒಂದು ಗ್ಯಾಂಗ್ ಇರುತ್ತದೆ ಅದರಲ್ಲಿ ನಾನು ಇರುತ್ತೇನೆ. ನಿರ್ದೇಶಕರು ಉತ್ತಮ ಚಿತ್ರ ಮಾಡಿದ್ದಾರೆ ಎಂದು ನಾಯಕಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ತಿಳಿಸಿದರು.

ಹಾಸ್ಯ ನಟರಾದ ಅಮಿತ್ ಹಾಗೂ ಕೆಂಪೇಗೌಡ, ಸಂಗೀತ ನಿರ್ದೇಶಕರಾದ ಅರ್ಮಾನ್ ಹಾಗೂ ಅಭಿಷೇಕ್ ಮುಂತಾದವರು ಚಿತ್ರದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು.

- Advertisement -

Latest Posts

Don't Miss