Sports News: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಳೆದ ತಿಂಗಳಿನಿಂದಲೇ, ಆಮಂತ್ರಣ ಕೊಡಲು ಶುರು ಮಾಡಲಾಗಿದೆ. ಅದರಂತೆ ಇಂದು ಕ್ರಿಕೇಟ್ ದೇವರು, ಸಚಿನ್ ಟೆಂಡೂಲ್ಕರ್ ಅವರಿಗೆ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಬರಲು ಆಮಂತ್ರಣ ನೀಡಲಾಯಿತು.
ಈಗಾಗಲೇ ದೇವಸ್ಥಾನದ ಟ್ರಸ್ಟ್ ಭಾರತದಲ್ಲಿರುವ 11 ಸಾವಿರ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದು, ಇಂಡು ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ಗೆ ಆಹ್ವಾನ ನೀಡಲಾಯಿತು. ಅವರ ಮನೆಗೆ ಹೋಗಿ, ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನಿಸಲಾಯಿತು.
ಈಗಾಗಲೇ ಹಲವು ಕ್ರೀಡಾತಾರೆಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ವಿರಾಟ್ ಕೊಹ್ಲಿ, ಪಿ.ವಿ.ಸಿಂಧು, ರೋಹಿತ್ ಶರ್ಮಾ ಸೇರಿ ಹಲವರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ಇದರೊಂದಿಗೆ ನಮ್ಮ ಕನ್ನಡ ನಟರಾದ ರಿಷಬ್ ಶೆಟ್ಟಿ, ಯಶ್, ನಿಖಿಲ್ ಕುಮಾರ್ ಸೇರಿ ಹಲವು ರಾಜಕೀಯ ಗಣ್ಯರಿಗೆ ಆಹ್ವಾಾನ ಬಂದಿದೆ.
ಇನ್ನು ಸಿಎಂಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಟ್ಟು, ಬೇರೆ ಯಾವ ಸಿಎಂಗೂ ಕೂಡ, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲವೆಂದು ಸುದ್ದಿ ಇದೆ. ಹಾಗಾದ್ರೆ ಜ.22ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಯಾರ್ಯಾರು ಬರ್ತಾರೆ..? ಯಾರ್ಯಾರು ಕಾರ್ಯಕ್ರಮದಿಂದ ದೂರ ಉಳಿಯುತ್ತಾರೆ ಕಾದು ನೋಡಬೇಕಿದೆ.
ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್
ರೇಪ್ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..