ಉತ್ತರ ಪ್ರದೇಶದ : ಉತ್ತರ ಪ್ರದೇಶದ ಲಖಿಮ್ ಪುರ್ ಖೇರಿಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಹತ್ಯೆ ಖಂಡಿಸಿ ಧರಣಿ ನಡೆಸುತ್ತಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃಷಿ ಕಾಯ್ದೆ ಜಾರಿ ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಮೋನು ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ 8 ಮಂದಿಯ ಸಾವಿಗೆ ಕಾರಣನಾಗಿದ್ದ. ಇದನ್ನ ಖಂಡಿಸಿ ಇಂದು ಅಖಿಲೇಶ್ ಯಾದವ್ ಉತ್ತರಪ್ರದೇಶದ ಲಖನೌನ ತಮ್ಮ ಮನೆಯೆದುರು ಧರಣಿ ಕೈಗೊಂಡಿದ್ದರು.
ಇನ್ನು ಲಖಿಮ್ ಪುರ್ ಗೆ ಭೇಟಿ ನೀಡೋದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಖಿಲೇಶ್ ತಮ್ಮ ನಿವಾಸದೆದುರೇ ಬಿಜೆಪಿ ಸರ್ಕಾರದ ವಿರುದ್ಧ ಧರಣಿ ಕೈಗೊಂಡಿದ್ರು. ಪ್ರತಿಭಟನೆಗೆ ನಾನಾ ಸಂಘಟನೆಗಳೂ ಕೈಜೋಡಿಸಿದ್ವು. ಪರಿಸ್ಥಿತಿ ಇನ್ನೂ ಹದಗೆಡಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಅಖಿಲೇಶ್ ಯಾದವ್ ರನ್ನು ವಶಕ್ಕೆ ಪಡೆದಿದ್ದಾರೆ.