Wednesday, October 29, 2025

Latest Posts

Sandalwood: ಭಟ್ರ ಮಗಳು ಸಿನಿಮಾಗೆ? ಕನ್ನಡಕ್ಕೆ ಫ್ಯೂಚರ್ ಇದೆ: Anita Bhat Podcast

- Advertisement -

Sandalwood News: ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅನಿತಾ ಭಟ್ ಅವರಿಗೆ ಮಗಳಿದ್ದು, ಆಕೆ ಕೂಡ ಸಿನಿಮಾ ಕ್ಷೇತ್ರಕ್ಕೆ ಬರುವ ಯೋಚನೆ ಇತ್ತು. ಹಾಗಾದ್ರೆ ಭಟ್ರು ತಮ್ಮ ಮಗಳನ್ನು ಸಿನಿಮಾ ಕ್ಷೇತ್ರಕ್ಕೆ ಕರೆ ತರುತ್ತಾರಾ..? ಈ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ.

ನಟಿ ಅನಿತಾ ಭಟ್ ಅವರು ಮೊದಲು ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದರು. ಬಳಿಕ ನಿರ್ಮಾಪಕಿಯಾಗಿ ಗೆದ್ದಿದ್ದರು. ಇದೀಗ ಕನ್ನಡ ಮತ್ತು ತೆಲುಗು ಎರಡರಲ್ಲೂ ಸಿನಿಮಾ ನಿರ್ಮಾಣದ ಮೂಲಕ ಅನಿತಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕೊರೋನಾ ಸಮಯದಲ್ಲಿ ಇಂದಿರಾ ಎನ್ನುವ ಮೂವಿ ನಿರ್ಮಾಣ ಮಾಡಿದ್ದ ಅನಿತಾ ಅದರಲ್ಲಿ ಸ್ವಲ್ಪ ಲಾಭವನ್ನೂ ಕಂಡರು. ಆಗ ಅವರಿಗೆ ಸಿನಿಮಾವನ್ನು ಮುಂಜಾಗರುಕತೆಯಿಂದ ನಿರ್ಮಾಣ ಮಾಡಿದ್ರೆ, ಅದು ನಮ್ಮನ್ನು ಗಲ್ಲಿಸುತ್ತದೆ ಎಂಬ ಅರಿವಾಯಿತಂತೆ. ಈ ಕಾರಣಕ್ಕೆ ಅನಿತಾ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇನ್ನು ಮಗಳನ್ನು ಸಿನಿಮಾ ಕ್ಷೇತ್ರಕ್ಕೆ ಕರೆತರುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅನಿತಾ, ಮಗಳಿಗೆ ಅವಕಾಶ ಬಂದಿತ್ತು. ಆದರೆ ಅದು ಕೈ ತಪ್ಪಿ ಹೋಯ್ತು. ಆಕೆಯೂ ಆ ಬಗ್ಗೆ ಪ್ರಯತ್ನಿಸಲು ಹೋಗಲಿಲ್ಲ. ಆಕೆ ಸೈಕೋಲಾಜಿಸ್ಟ್ ಆದ ಕಾರಣ, ಅವಳ ಕೆಲಸದಲ್ಲಿ ಅವಳು ಬ್ಯುಸಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss