Sandalwood News:ನಟ ತಬಲಾ ನಾಣಿ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ತಮ್ಮ ವಿಭಿನ್ನ ನಟನಾ ಶೈಲಿಯಿಂದಲೇ ಜನರ ಮನಸ್ಸು ಗೆದ್ದಿರುವ ನಾಣಿ ಅವರು, ತಬಲಾ ವಾದಕರು ಕೂಡ ಹೌದು. ಹಾಗಾದ್ರೆ ನಾಣಿ ತಬಲಾ ಕಲಿತಿದ್ದು ಹೇಗೆ..? ಯಾವ ವಯಸ್ಸಿನಲ್ಲಿ ಅಂತಾ ಮಾತನಾಡಿದ್ದಾರೆ.
ತಬಲಾ ನಾಣಿಯವರು ತುಮಕೂರು ಜಿಲ್ಲೆಯ ಕೊರಟಗೆರೆಯವರು. ಇವರದ್ದು ಮ್ಯೂಸಿಕ್ ಫ್ಯಾಮಿಲಿ. ಇವರ ತಂದೆ ತಬಲಾ ವಾದಕರು. ಹೆಸರು ಆಂಜೀನಪ್ಪಾ. ಅಲ್ಲದೇ, ಮನೆಯಲ್ಲಿ ಎಲ್ಲರೂ ಗಾಯಕರೇ. ಇನ್ನು ತಾಯಿ ಸಾಕಮ್ಮ ಅವರ ಸೋದರ ಮಾವಂದಿರು ಮೈಸೂರು ಅರಮನೆ ವಿದ್ವಾಂಸರು. ಹಾಗಾಗಿ ಹಾಡು ಹೇಳುತ್ತ ಕೇಳುತ್ತ ಬೆಳೆದವರು ತಬಲಾ ನಾಣಿ.
ಅಲ್ಲದೇ, ಮನೆಯಲ್ಲಿ ಎಲ್ಲರೂ ಕುಳಿತು ಪ್ರತೀ ಶನಿವಾರ ಭಜನೆ ಮಾಡಲೇಬೇಕು. ಹೀಗಾಗಿ ಆ ಭಜನೆ, ಸಂಗೀತ, ಕಲೆಯಲ್ಲಿದ್ದ ಆಸಕ್ತಿಯೇ ನಾಣಿಯವರನ್ನು ಇಲ್ಲಿಯವರೆಗೂ ಕರೆ ತಂದದ್ದು. ಇನ್ನು ನಾಣಿಯವರು ಹೇಗೆ ತಬಲಾ ಕಲಿತಿದ್ದು ಅಂತಾ ಅವರೇ ಹೇಳಿದ್ದಾರೆ.
ನಾಣಿಯವರ ತಂದೆ ನಾಣಿಯವರು ಎದುರಿಗೆ ಆಡುತ್ತಿದ್ದಾಗ, ಬೇಕಂತಲೇ ತಬಲಾ ಬಿಟ್ಟು ಎದ್ದು ಹೋಗುವವರು. ಆಗ ನಾಣಿ ಹೋಗಿ, ಆ ತಬಲಾ ಬಾರಿಸುವ ಪ್ರಯತ್ನ ಮಾಡುತ್ತಿದ್ದರು. ಹೀಗೆ ಪ್ರಾಕ್ಟೀಸ್ ಮಾಡಿ ಮಾಡಿ, ನಾಣಿಯವರಿಗೆ ಬಾರಿಸಲು ತಾಮ್ರದ ಬಿಂದಿಗೆ ನೀಡುತ್ತಿದ್ದರು.ಇದೇ ರೀತಿ ಮಾಡಿ ಮಾಡಿ, ಕೊನೆಗೆ ನಾಣಿ ತಬಲಾ ಬಾರಿಸಲು ಕಲಿತರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

