Sandalwood News: ನಟಿ ಮೋಕ್ಷಿತಾ ಪೈ ಪಾರು ಧಾರಾವಾಹಿಯ ಬಳಿಕ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್ ಸೀಸನ್ 11ನಲ್ಲಿ ಭಾಗವಹಿಸಿದ್ದರು. ಫಿನಾಲೆವರೆಗೂ ಬಂದಿದ್ದ ಮೋಕ್ಷಿತಾ, ಕಪ್ ಗೆಲ್ಲಲಾಗದೇ ಹೊರಬಂದರು. ಇದೀಗ ಮೋಕ್ಷಿತಾ ಟೆಂಪಲ್ ರನ್ ಶುರು ಮಾಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಮೋಕ್ಷಿತಾ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಾರು ಧಾರಾವಾಹಿಯಲ್ಲಿ ತಮ್ಮನ ಪಾತ್ರ ವಹಿಸಿದ್ದ ಗಗನ್ ಜೊತೆ ಮೋಕ್ಷಿತಾ ಮೈಸೂರಿನ ಚಾಮುಂಡೆ ಬೆಟ್ಟಕ್ಕೆ ಹೋಗಿ, ದೇವಿಯ ದರ್ಶನ ಮಾಡಿದ್ದಾರೆ. ಈ ವೇಳೆ ಅವರ ಫ್ಯಾನ್ಸ್ ಮೋಕ್ಷಿತಾ ಜೊತೆ ಸೆಲ್ಫಿಗಾಗಿ ಮುಗಿಬಿದ್ದು, ಸೆಲ್ಫಿ ತೆಗೆದುಕೊಂಡಿದ್ದಾರೆ.
ಬಿಗ್‌ಬಾಾಸ್ ಮನೆಯಿಂದ ಹೊರಬಂದ ಬಳಿಕ ಮೋಕ್ಷಿತಾಳನ್ನು ಆರತಿ ಮಾಡಿ, ಒಳಗೆ ಕರೆದುಕೊಳ್ಳಲಾಯಿತು. ಈ ಬಗ್ಗೆ ತಮ್ಮ ಇನ್‌ಸ್ಚಾ ಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಮೋಕ್ಷಿತಾ, ಈ 120 ದಿನಗಳ ನನ್ನ ಬಿಗ್ ಬಾಸ್ ಪ್ರಯಾಣ ನಿಜಕ್ಕೂ ಅಪರೂಪದ ಅನುಭವ. ನಿಮ್ಮ ಪ್ರೀತಿ, ಬೆಂಬಲ, ಮತ್ತು ಆಶೀರ್ವಾದದೊಂದಿಗೆ ನಾನು ಕೊನೆಯ ದಿನದವರೆಗೆ ಮನೆಯಲ್ಲಿ ಉಳಿಯಲು ಸಾಧ್ಯವಾಯಿತು. ನನ್ನನ್ನು ಪ್ರೀತಿಯಿಂದ ಬೆಂಬಲಿಸಿದ ಕನ್ನಡ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಲು ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ಈ ಪ್ರಯಾಣ ನನ್ನ ಜೀವನದ ಅತ್ಯುತ್ತಮ ನೆನಪಾಗಿಯೇ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಬಿಗ್‌ಬಾಸ್ ಮನೆಯಲ್ಲಿರುವಾಗ ಮೋಕ್ಷಿತಾ ಮಕ್ಕಳ ಕಳ್ಳಿ ಎಂದು ಟ್ರೋಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ನಿರಪರಾಧಿ ಎಂದು ಸಾಬೀತಾಗಿದೆ. ವೀವ್ಸ್‌ಗೋಸ್ಕರ್ ಏನೇನೋ ಮಾಡ್ತಾರೆ. ಆದ್ರೆ ನಾನು ಕಾನೂನು ಕ್ರಮ ಕೈಗೊಂಡು ತೊಂದರೆ ಕೊಡುವುದಿಲ್ಲ. ಹಾಗೆ ತೊಂದರೆ ಕೊಟ್ಟರೆ, ಎಂಥ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ನನಗೆ ಗೊತ್ತು. ಹಾಗಾಗಿ ನಾನು ಬೇರೆಯವರಿಗೆ ಅಂಥ ಕಷ್ಟ ಕೊಡುವುದಿಲ್ಲ. ನಾನು ನಿರಪರಾಧಿ ಎಂಬ ಸರ್ಟಿಫಿಕೇಟ್ ಕೂಡ ನನ್ನ ಬಳಿ ಇದೆ ಎಂದು ಮೋಕ್ಷಿತಾ ಹೇಳಿದ್ದಾರೆ.




