Sandalwood News: ಪ್ರಪಂಚದಲ್ಲಿ ಒಂದೇ ತರಹ ಇರುವ ಏಳು ಜನ ಮನುಷ್ಯರು ಇರುತ್ತಾರೆಂದು ಬುದ್ದಿಜೀವಿಗಳು ಗತಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಅದು ನಿಜವೆಂಬುದು ಮತ್ತೋಮ್ಮೆ ಸಾಬೀತು ಆಗಿದೆ. ಮೊನ್ನೆಯಷ್ಟೇ ’ರಕ್ಕಸ’ ಎನ್ನುವ ಸಿನಿಮಾದ ನಾಯಕನಾಗಿ ರಾಜ್‌ಚರಣ್ ಅಭಿನಯಿಸುತ್ತಿದ್ದು, ಇದು ಇವರಿಗೆ ಐದನೇ ಅವಕಾಶ. ಸೋಜಿಗ ಎನ್ನುವಂತೆ ವಿಶ್ವಮಟ್ಟದಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿರುವ ನಮ್ಮ ಕನ್ನಡಿಗ ಯಶ್ ತದ್ರೂಪಿ ಎನ್ನಬಹುದು. ಅವರ ನೋಟ, ಹಾವ ಭಾವ ಎಲ್ಲವು ರಾಕಿ ಬಾಯ್ ನೋಡಿದಂತೆ ಆಗುವುದರಲ್ಲಿ ಸಂದೇಹವೇ ಇಲ್ಲ. ಸೂಪರ್ ಹಿಟ್ ಚಿತ್ರ ’ಮಫ್ತಿ’ ಹಾಡಿನಲ್ಲಿ ಬರುವ ಪದವನ್ನು ಟೈಟಲ್‌ಗೆ ಬಳಸಲಾಗಿದೆ.
’ಅನಾವರಣ’ ಮತ್ತು ’ಉಗ್ರಾವತಾರ’ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ನಂದಕುಮಾರ್.ಸಿ ಹೊಸ ಅನುಭವ ಎನ್ನುವಂತೆ ಕ್ಯಾಮಾರ ಹಿಡಿಯುವುದರ ಜತೆಗೆ ನಿರ್ದೇಶನದ ಕ್ಯಾಪ್‌ನ್ನು ಹಾಕಿಕೊಳ್ಳುತ್ತಿದ್ದಾರೆ. ಎವಿಆರ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆದಿದೆ.
ಕಾಲ್ಪನಿಕ ಕ್ರೈಂ ಥ್ರಿಲ್ಲರ್‌ದಲ್ಲಿ ಸಿಹಿಯಾದ ಪ್ರೀತಿ ಕಥೆ ತಂಬಿಕೊಂಡಿದೆ. ಸಮಾಜದಲ್ಲಿ ಜನರಿಗೆ ವೈದ್ಯಕೀಯ ಬಹಳ ಮುಖ್ಯವಾಗಿರುತ್ತದೆ. ಆದರೆ ಇದರಲ್ಲಿ ನಡೆಯುವ ಭೂಗತಲೋಕದ ಹಲವು ಮಜಲುಗಳು ಯಾವ ರೀತಿ ನಡೆಯುತ್ತದೆ ಎಂಬುದು ತಿಳಿದಿರುವುದಿಲ್ಲ. ಇಂತಹ ಅಂಶಗಳನ್ನು ಕೆದಕಿ, ಅದನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಎರಡು ಶೇಡ್‌ಗಳಲ್ಲಿ ರಾಜ್‌ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಂದು ಜಿಂಟ್ರೈನರ್ ಆಗಿರುತ್ತಾರೆ. ಖಡಕ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ರವಿರೆಡ್ಡಿ ನಟನೆ ಇದೆ. ನಾಯಕಿ ಇನ್ನುಳಿದ ಪಾತ್ರಗಳ ತಲಾಷ್ ನಡೆಯುತ್ತಿದೆ. ಸದ್ಯದಲ್ಲೆ ಅದರ ವಿವರವನ್ನು ನೀಡುವುದಾಗಿ ತಂಡವು ಹೇಳಿಕೊಂಡಿದೆ. ಸಂಗೀತ ಶಿವುಭದ್ರಾವತಿ, ಬರವಣಿಗೆ ಗುರುಮೂರ್ತಿ, ಸಾಹಿತ್ಯ ಕೆಜಿಎಫ್ ಖ್ಯಾತಿಯ ಕಿನ್ನಾಳ್‌ರಾಜ್, ಚಿತ್ರಕಥೆ ರಂಗೋಲಿ ವಿಜಿ, ಸಂಕಲನ ಮಹೇಶ್ ಗಂಗಾವತಿ, ನೃತ್ಯ ವಸುಂಧರ.ಎನ್.ದೇವರಾಜ್ ಅವರದಾಗಿದೆ. ಮಾತಿನ ಭಾಗವನ್ನು ಬೆಂಗಳೂರು, ಕೋಲಾರ, ಬಂಗಾರಪೇಟೆ ಹಾಗೂ ಹಾಡುಗಳಿಗೆ ಮಂಗಳೂರು, ಉಡುಪಿ ಕಡೆಗೆ ಶೂಟಿಂಗ್ ನಡೆಸಲು ಯೋಜನೆ ರೂಪಿಸಿಲಾಗಿದೆ.