Sandalwood News: ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಟಿ ಅನಿತಾ ಭಟ್ ಅವರು ಮೊದಲು ಇಷ್ಟು ಬೋಲ್ಡ್ ಆಗಿರಲಿಲ್ಲ. ಏಕೆಂದರೆ ಅವರ ಮನೆಯಲ್ಲಿ ಅಷ್ಟು ಸ್ಟ್ರಿಕ್ಟ್ ಆಗಿದ್ದರು. ಮನೆಯಲ್ಲಿ ಜೀನ್ಸ್ ಹಾಾಕಲು ಕೂಡ ಪರ್ಮಿಷನ್ ಇರಲಿಲ್ಲ. ಈ ಬಗ್ಗೆ ಅನಿತಾ ಸಾಕಷ್ಟು ಮಾತನಾಡಿದ್ದಾರೆ.
ನಟಿ ಅನಿತಾ ಭಟ್ ಅವರು ಬ್ರಾಹ್ಮಣರಾಗಿರುವುದರಿಂದ, ಅವರ ಅಪ್ಪ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿದ್ದಾರೆ. ಮೊದಲೆಲ್ಲ ಜೀನ್ಸ್ ಪ್ಯಾಂಟ್ ಹಾಾಕಿ, ಅದರ ಮೇಲೆ ಕುರ್ತಿ ಹಾಕಿದ್ರೂ ಅಪ್ಪ ಅಮ್ಮ ಬೈತಿದ್ರು ಅಂತಾ ಹೇಳುವ ಅನಿತಾ ಭಟ್ ಅವರಿಗೆ ಈಗಲೂ ಅಪ್ಪನ ಮನೆಯಲ್ಲಿ ಪ್ಯಾಂಟ್ ಶರ್ಟ್, ಜೀನ್ಸ್ ಎಲ್ಲಾ ಹಾಕುವ ಪರ್ಮಿಷನ್ನೇ ಇಲ್ಲ. ಆದರೆ ನೀನು ಆಚೆ ಹೇಗೆ ಬೇಕಾದ್ರೂ ಇರು, ಮನೆಗೆ ಬಂದಾಗ, ಬರುವಾಗ ಚೂಡಿದಾರವನ್ನೇ ಧರಿಸಿ ಬರಬೇಕು ಎಂದು ಅನಿತಾ ಅವರ ಅಪ್ಪ-ಅಮ್ಮ ತಾಕೀತು ಮಾಡಿದ್ದಾರಂತೆ.
ಇನ್ನು ಗ್ಲಾಮರ್ ಬಗ್ಗೆ ಮಾತನಾಡಿರುವ ಅನಿತಾ ಭಟ್, ಸಿನಿಮಾದಲ್ಲಿ ನಟಿಸಲು ಗ್ಲಾಮರ್ ಮುಖ್ಯ ಅಲ್ಲವೇ ಅಲ್ಲ. ಗ್ಲಾಮರ್, ಅಂದ, ಚೆಂದ, ಎಲ್ಲವೂ ಇರಬೇಕು. ಜೊತೆಗೆ ನಟನೆಯೂ ಸರಿಯಾಗಿ ಬರಬೇಕು. ಬಾಲಿವುಡ್‌ನಲ್ಲಿ ಭೂಮಿ ಪೆಡ್ನೇಕರ್, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಾಗಿ ದಪ್ಪಗಾಗಿದ್ದರು. ಹೀಗಾಗಿ ಗ್ಲಾಮರ್ ಇದ್ದಾಗಷ್ಟೇ ನಟಿಯರು ಎನ್ನಿಸಿಕೊಳ್ಳುವುದಿಲ್ಲವೆಂದು ಅನಿತಾ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

