Sandalwood News: ಯಾವುದೇ ಸಿನಿಮಾ ಸೆಲಿಬ್ರಿಟಿಗಳಿರಲಿ, ಅವರು ಆಗಾಗ ವಿನಾಕಾರಣ ಸುದ್ದಿ ಆಗ್ತಾನೆ ಇರ್ತಾರೆ. ಅದರಲ್ಲೂ ಅವರು ಹಾಕುವ ಡ್ರೆಸ್ ಇರಲಿ, ಖರೀದಿಸುವ ಕಾರು, ಬೈಕ್ ಇರಲಿ ಅಥವಾ ಅವರು ಮಾತನಾಡುವ ಶೈಲಿ ಆಗಿರಲಿ ಒಂದಷ್ಟು ವಿವಾದಕ್ಕೆ ಕಾರಣರಾಗಿಬಿಡುತ್ತಾರೆ. ಮಾತಾಡಿದರೂ ತಪ್ಪು, ಮಾತಾಡದಿದ್ದರೂ ತಪ್ಪು. ಸಾರ್ವಜನಿಕ ಬದುಕಿನಲ್ಲಿರುವ ಸೆಲಿಬ್ರಿಟಿಗಳು ಅಳೆದು ತೂಗಿ ಮಾತನಾಡಿದರೆ ಅದಕ್ಕೊಂದು ಅರ್ಥ. ಅವರ ನಯ-ವಿನಯತೆಯೂ ಅಷ್ಟೇ ಮುಖ್ಯ ಆಗುತ್ತೆ. ಯಾಕೆಂದರೆ, ಈಗ ಸೋಶಿಯಲ್ ಮೀಡಿಯಾ ಸಾಕಷ್ಟು ಸ್ಟ್ರಾಂಗ್ ಆಗಿದೆ. ಯಾರು ಎಲ್ಲೇ ಹೋದರು, ಏನೇ ಮಾಡಿದರೂ, ಯಾವ ವಿಷಯ ಪ್ರಸ್ತಾಪ ಮಾಡಿದರೂ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಅಷ್ಟೇ ಯಾಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆದು ಟ್ರೋಲ್ ಕೂಡ ಆಗಿಬಿಡುತ್ತೆ. ಒಂದಷ್ಟು ಚರ್ಜೆಗೂ ಒಳಪಡುತ್ತೆ.
ಈಗ ತೆಲುಗಿನ ಸೂಪರ್ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಹೇಳಿದ ಮಾತೊಂದು ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಇಷ್ಟಕ್ಕೂ ಅವರು ಹೇಳಿದ ಆ ವಿವಾದದ ಮಾತೇನು? ಹಾಗೆ ಹೇಳೋದಾದರೆ, ಕಳೆದ ಎರಡು ವರ್ಷದ ಹಿಂದೆ ಚಿರಂಜೀವಿ ಅವರು ತಮ್ಮ ಮನೆಗೆ ಮೊಮ್ಮಗಳನ್ನು ಸ್ವಾಗತಿಸಿದ್ದರು. ರಾಮ್ ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಹೆಣ್ಣು ಮಗುವಿಗೆ ಕ್ಲಿಂಕಾರ ಎಂದು ನಾಮಕರಣ ಕೂಡ ಮಾಡಿದ್ದರು. ಇತ್ತೀಚೆಗೆ ‘ಬ್ರಹ್ಮಾಆನಂದಂ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಚಿರಂಜೀವಿ ಅವರು ಚೀಫ್ ಗೆಸ್ಟ್ ಆಗಿ ಹೋಗಿದ್ದರು. ವೇದಿಕೆ ಮೇಲೆ ಮಾತನಾಡುವಾಗ, ರಾಮ್ ಚರಣ್‌ಗೆ ಎರಡನೆಯದ್ದು ಗಂಡು ಮಗು ಆಗಬೇಕು, ಆ ಮೂಲಕ ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಹೇಳಿಕೆ ನೀಡಿದ್ದರು.
ಚಿರಂಜೀವಿ ಅವರ ಈ ಹೇಳಿಕೆ ಇದೀಗ ಭಾರೀ ಸೌಂಡ್ ಮಾಡುತ್ತಿದೆ. ಅವರ ಮಾತನ್ನು ಕೆಲವರು ಟೀಕಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿ ಇಂತಹ ಅಭಿಪ್ರಾಯ ಹೊಂದಿದ್ದಾರಾ? ಹೆಣ್ಣು ಮಕ್ಕಳು ಇಂದು ಯಾವುದರಲ್ಲಿ ಕಮ್ಮಿ ಇದ್ದಾರೆ? ಗಂಡು- ಹೆಣ್ಣು ಎಂದು ಭೇದ ಮಾಡಿ ಮಾತನಾಡುವುದು ಅಂತಹವರಿಗೆ ಶೋಭೆ ಅಲ್ಲ ಎಂದು ಕಾಮೆಂಟ್ ಕೂಡ ಮಾಡ್ತಾ ಇದ್ದಾರೆ. ಇದೇ ಮಾತು ಬೇರೆ ಯಾರಾದರೂ ಹೇಳಿದ್ದರೆ ಭಾರೀ ವಿವಾದಕ್ಕೆ ಕಾರಣವಾಗುತ್ತಿತ್ತು. ಆದರೆ, ಚಿರಂಜೀವಿ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮನೋಭಾವದಿಂದ ಮಾತಾಡಿದ್ದಾರೆ. ಅವರ ಬಗ್ಗೆ ಯಾರೂ ಕೇಳಲ್ಲವೇ ಎಂಬ ಪ್ರಶ್ನೆಗಳೂ ಎದ್ದಿವೆ.
ಬ್ರಹ್ಮಾ ಆನಂದಂ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಚಿರಂಜೀವಿ ಅವರು ತಮ್ಮ ಮೊಮ್ಮಗಳ ಜೊತೆ ಇರುವ ಫೋಟೋವೊಂದನ್ನು ಪ್ರದರ್ಶಿಸಲಾಯಿತು. ಅದನ್ನು ನೋಡಿದ ಚಿರಂಜೀವಿ ಅವರು “ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್ ವಾರ್ಡನ್ ತರ ಭಾಸವಾಗುತ್ತದೆ, ಸುತ್ತಾ ಹೆಣ್ಣು ಮಕ್ಕಳೇ ಎಂದು ಹೇಳಿ ನಕ್ಕಿದ್ದಾರೆ. ಚರಣ್ ಈ ಬಾರಿ ಒಂದು ಗಂಡು ಮಗು ಬೇಕು ಕಣೋ, ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಕೋರಿಕೆ. ಕ್ಲಿಂಕಾರ ಅಂದ್ರೆ ಬಹಳ ಮುದ್ದು, ಆದರೆ ಚರಣ್‌ಗೆ ಮತ್ತೊಂದು ಹೆಣ್ಣು ಆಗುತ್ತಾ ಎಂದು ಭಯ” ಎಂದು ನಕ್ಕು ಸುಮ್ಮನಾಗಿದ್ದಾರೆ.
ಮಗು ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ಒಂದೇ, ಭೇದಭಾವ ಮಾಡುವುದು ಎಷ್ಟು ಸರಿ ಅನ್ನೋದು ಬಹುತೇಕ ಕಾಮೆಂಟಿಗರ ಪ್ರಶ್ನೆ. ಚಿರಂಜೀವಿ ಅವರು ದೊಡ್ಡ ಸ್ಟಾರ್ ನಟರು. ಅಂತಹವರೇ ಈ ರೀತಿ ಸಾರ್ವಜನಿಕವಾಗಿ ಮಾತನಾಡಿದರೆ, ಸಾಮಾನ್ಯ ಜನರೂ ಸಹ ಹೀಗೆಯೇ ಯೋಚಿಸುವುದಿಲ್ಲವೇ. ಈ ಶತಮಾನದಲ್ಲೂ ಹೆಣ್ಣು ಸಂತಾನದ ಬಗ್ಗೆ ತಾತ್ಸಾರ ಮನೋಭಾವ ಯಾಕೆ? ಎಂದು ಪ್ರಶ್ನಿಸಿರುವ ಹಲವರು, ಇಂತಹ ದಿಗ್ಗಜ ನಟರು ಹೀಗೆ ಮಾತಾಡಿದ್ದು ನಿಜಕ್ಕೂ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಅದೇನೆ ಇರಲಿ, ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು ಅನ್ನೋ ಮಾತಿದೆ. ಹಾಗಾಗಿ ನಾವು ಏನು ಮಾತಾಡ್ತೀವಿ ಅನ್ನೊದು ಕೂಡ ಅಷ್ಟೇ ಮುಖ್ಯ. ಸ್ಟಾರ್ ನಟರನ್ನು ಫಾಲೋ ಮಾಡುವ ಅದೆಷ್ಟೋ ಅಭಿಮಾಗಳಿರುತ್ತಾರೆ. ಅವರಿಗೆ ಸ್ಟಾರ್ ನಟರ ಮಾತುಗಳು ಪ್ರಭಾವ ಬೀರಬಾರದು. ಒಳ್ಳೆಯದನ್ನು ಬೇಗ ತೆಗೆದುಕೊಳ್ಳೋದು ಕಷ್ಟ. ಇನ್ನು, ಈ ರೀತಿಯ ತಾತ್ಸಾರ ಮಾತುಗಳು ಬಹುಬೇಗ ರೀಚ್ ಆಗಿಬಿಡುತ್ತವೆ.
ಒಟ್ಟಾರೆ, ಚಿಂರಜೀವಿ ಆಡಿದ ಮಾತು ತಮ್ಮ ಮನೆಯೊಳಗೆ ಇದ್ದಿದ್ದರೆ ಇಷ್ಟೊಂದು ಚರ್ಚೆ ಆಗುತ್ತಿರಲಿಲ್ಲ. ಮನೆಯೊಳಗೇ ಮಗನ ಮುಂದೆ ಈ ಕೋರಿಕೆ ಇಟ್ಟುಕೊಳ್ಳಲಿ. ಸಾರ್ವಜನಿಕವಾಗಿ ಹೇಳಿದರೆ, ಏನೆಲ್ಲಾ ಪರಿಣಾಮ ಆಗುತ್ತೆ ಅನ್ನುವುದಕ್ಕೆ ಚಿರು ಅವರು ಈ ಮಾತೇ ಸಾಕ್ಷಿ.
ಅಂದಹಾಗೆ, ಚಿರಂಜೀವಿಗೆ ಈಗ 65 ವಯಸ್ಸು 65. ಆದರೂ ಅವರು ಇನ್ನೂ ಸೂಪರ್ ಸ್ಟಾರ್ ನಟ. ಎರಡು ವರ್ಷದ ಹಿಂದೆ ‘ವಾಲ್ತೇರು ವೀರಯ್ಯ’ ಬಂದಿತ್ತು. ಅದು ಹಿಟ್ ಆಗಿತ್ತು ಕೂಡ. ಆ ನಂತರ ಬಂದ ‘ಭೋಳಾ ಶಂಕರ್’ ಚಿತ್ರ ಹೇಳ ಹೆಸರಿಲ್ಲದಂತಾಯ್ತು. ಇದೀಗ ‘ವಿಶ್ವಂಭರ’ ಎಂಬ ಸೋಶಿಯೋ ಫ್ಯಾಂಟಸಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀಕಾಂತ್ ಓದೆಲ, ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರಗಳಲ್ಲೂ ಚಿರಂಜೀವಿ ನಟಿಸಲಿದ್ದಾರೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ