Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಜೂನ್ 1ಕ್ಕೆ ಜೈಲು ಸೇರಿದ್ದ ನಟ ತೂಗುದೀಪ ದರ್ಶನ್‌ಗೆ 6 ವಾರಗಳ ಜಾಮೀನು ಮಂಜೂರಾಗಿದೆ. ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುವ ಕಾರಣಕ್ಕೆ, ದರ್ಶನ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಕೋರ್ಟ್ ಷರತ್ತು ಕೂಡ ವಿಧಿಸಿದೆ.
ಈ ಹಿಂದೆ ಜಾಮೀನಿಗಾಗಿ ದರ್ಶನ್ ಹಲವು ಬಾರಿ ಮನವಿ ಮಾಡಿದ್ದರೂ ಕೂಡ, ಜಾಮೀನು ಮಂಜೂರು ಮಾಡಲು ಕೋರ್ಟ್ ನಿರಾಕರಿಸಿತ್ತು. ಆದರೆ ಇದೀಗ ದರ್ಶನ್‌ಗೆ ತೀವ್ರ ಬೆನ್ನು ನೋವು ಇದ್ದು, ಇದನ್ನು ಹೀಗೆ ಬಿಟ್ಟರೆ. ಮುಂದೆ ಪಾರ್ಶ್ವ ವಾಯುವಾಗುವ ಸಾಧ್ಯತೆ ಇದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲು ಜಾಮೀನು ಬೇಕೆಂದು ದರ್ಶನ್ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕಾರಣಕ್ಕೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಇನ್ನು ದರ್ಶನ್ ಪಾಸ್‌ಪೋರ್ಟ್‌ನ್ನು ಕೋರ್ಟ್‌ಗೆ ನೀಡಬೇಕು ಎಂದು ಆದೇಶಿಸಿದ್ದು, ಚಿಕಿತ್ಸೆ ಪಡೆದ ಒಂದು ವಾರದೊಳಗೆ ಅದರ ರಿಪೋರ್ಟ್‌ನ್ನು ಕೋರ್ಟ್‌ಗೆ ಸಲ್ಲಿಸಬೇಕಾಗಿದೆ. ಮತ್ತು ದರ್ಶನ್ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸುತ್ತಾರೋ, ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಲಾಗಿದೆ.




