Monday, April 7, 2025

Latest Posts

Sandalwood News: ಕಿಚ್ಚನ ಸಖತ್ ವರ್ಕೌಟ್‌ಗೆ ಫ್ಯಾನ್ಸ್ ಫಿದಾ!

- Advertisement -

Sandalwood News: ಸಿನಿಮಾ ಹೀರೋ ಅಂದಮೇಲೆ ಹ್ಯಾಂಡ್ ಸಮ್ ಆಗಿರಬೇಕು. ದೇಹ ಕಟ್ಟುಮಸ್ತಾಗಿರಬೇಕು. ಒಳ್ಳೇ ಹೈಟು, ಪರ್ಸನಾಲಿಟಿ ಇರಲೇಬೇಕು. ಈ ಎಲ್ಲಾ ಕ್ವಾಲಿಟೀಸ್ ಜೊತೆಗೆ ನಟನೆಯೂ ಗೊತ್ತಿರಬೇಕು. ಆಗ ಮಾತ್ರ ಅವರನ್ನು ಹೀರೋ ಅಂತ ಒಪ್ಕೋಳೋಕೆ ಸಾಧ್ಯ. ಇನ್ನು ಕೆಲವು ನಟರು ಪಾತ್ರಕ್ಕೆ ತಕ್ಕಂತೆ ಬಾಡಿ ಶೇಪ್ ಮಾಡಿಕೊಳ್ಳೋದು ಕೂಡ ಕಾಮನ್. ಅದರಲ್ಲೂ ಮಾಸ್ ಸಿನಿಮಾ ಅಂದರಂತೂ ಮುಗೀತು. ದಿನ ನಿತ್ಯ ಜಿಮ್ ಗೆ ಹೋಗೋದು ಬಾಡಿ ಸ್ಟ್ರಾಂಗ್ ಮಾಡಿಕೊಳ್ಳೋದು ಗೊತ್ತೇ ಇದೆ. ಅದರಿಂದ ನೋಡುಗರಿಗೂ ಹೀರೋ ಮೆಟಿರೀಯಲ್ ಅನಿಸಬೇಕು ಅಷ್ಟರ ಮಟ್ಟಿಗೆ ರೆಡಿಯಾಗಿಬಿಡುತ್ತಾರೆ.

ನಟರ ತಯಾರಿ ಕುರಿತು ಯಾಕೀ ಮಾತು ಅನ್ನೋ ಪ್ರಶ್ನೆಗೆ, ಉತ್ತರ ಒಂದು ಫೋಟೋ. ಇಷ್ಟಕ್ಕೂ ಯಾವ ಫೋಟೋವದು ಅಂದರೆ ಅದು ಕಿಚ್ಚ ಸುದೀಪ್ ಅವರು ಅಪ್ ಲೋಡ್ ಮಾಡಿರುವ ಫೋಟೋ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ ಸುದೀಪ್ ಏಪ್ರಿಲ್ 16 ಅನ್ನೋ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಲ್ಲಿಗೆ ಒಂದು ಕುತೂಹಲ ಮತ್ತು ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ. ಇಲ್ಲಿ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿದ್ದು ಆ ಫೋಟೋ. ಕಾರಣ, ಕಟ್ಟು ಮಸ್ತಾದ ವರ್ಕೌಟ್ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅದೇ ಆ ವಿಶೇಷಕ್ಕೆ ಕಾರಣ, ಸುದೀಪ್ ಮೊದಲಿನಿಂದಲೂ ಸಖತ್ ಆಗಿ ಬಾಡಿ ಮೇಂಟೇನ್ ಮಾಡಿಕೊಂಡು ಬಂದವರು. ಯಾವುದೇ ಸಿನಿಮಾ ಇರಲಿ, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಲ್ಲುತ್ತಾರೆ. ಅವರು ಇದುವರಗೆ ಮಾಡಿರುವ ತರಹೇವಾರಿ ಪಾತ್ರಗಳಲ್ಲೂ ಗಮನಸೆಳೆದಿದ್ದಾರೆ.

ಹಾಗೆ ನೋಡಿದರೆ ಸುದೀಪ್ ದೇಹವನ್ನು ಹಚ್ಚು ದಂಡಿಸಲ್ಲ. ಸಿಂಪಲ್ ಆಗಿಯೇ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಹಾಗೆ ನೋಡುಗರಿಗೂ ಇಷ್ಟವಾಗುತ್ತಾರೆ. ಪಾತ್ರಕ್ಕೆ ಅಗತ್ಯವಿದೆ ಅಂತ ಅನಿಸಿದರಂತೂ ಸುದೀಪ್ ಸಿಕ್ಕಾಪಟ್ಟೆ ವರ್ಕೌರ್ಟ ಮಾಡುವುದುಂಟು. ಹಿಂದಿನ ಹಲವಾರು ಸಿನಿಮಾಗಳಲ್ಲಿ ಸುದೀಪ್ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಮಾಡಿಕೊಂಡಿದ್ದುಂಟು. ತಮ್ಮ ಫ್ಯಾನ್ಸ್ ಕೂಡ ಹುಬ್ಬೇರಿಸುವಂತೆ ಬಾಡಿ ಬಿಲ್ಡ್ ಮಾಡಿದ್ದೂ ಗೊತ್ತೇ ಇದೆ. ಈಗ ಮತ್ತೊಮ್ಮೆ ಸುದೀಪ್ ತಮ್ಮ ದೇಹವನ್ನು ದಂಡಿಸಿದ್ದಾರೆ. ಸಖತ್ ವರ್ಕೌರ್ಟ ಮಾಡಿ, ಸಿ್ಕ್ಕಾಪಟ್ಟೆ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಮ್ಯಾಕ್ಸ್‌ ಚಿತ್ರದ ನಂತರ ಹೊಸ ಸಿನಿಮಾಗೆ ಸುದೀಪ್ ತಯಾರಿ ಮಾಡಿಕೊಳ್ಳುತ್ತಿರುವುದು ನಿಜ. ಅದರಲ್ಲೇ ಅವರು ಬ್ಯುಸಿಯಾಗಿದ್ದರು. ಸದ್ಯ ಅವರ ಕೈಯಲ್ಲಿ ಒಂದಷ್ಟು ಹೊಸ ಸಿನಿಮಾಗಳಿವೆ. ಹಾಗೆ ನೋಡಿದರೆ, ವಿಕ್ರಾಂತ್ ರೋಣ ನಂತರ ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಬಿಲ್ಲಾ ರಂಗ ಭಾಷ ಸಿನಿಮಾ ಅನೌನ್ಸ್ ಮಾಡಿದ್ದ ಅನೂಪ್ ಆ ತಯಾರಿಯಲ್ಲಿ ಅವರಿದ್ದಾರೆ. ಆ ಸಿನಿಮಾಗಾಗಿಯೇ ಸುದೀಪ್ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರ ಎಂಬ ಪ್ರಶ್ನೆ ಕೂಡ ಇದೆ. ಆದರೆ, ಅದೇನೆ ಇದ್ದರೂ, ಸುದೀಪ್ ಪಾತ್ರ ಡಿಮ್ಯಾಂಡ್ ಮಾಡುತ್ತೆ ಅಂದರೆ, ಯಾವುದೇ ಸಿನಿಮಾ ಇರಲಿ, ಮೊದಲು ಪಾತ್ರಕ್ಕೆ ತಕ್ಕಂತೆ ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲೋದು ಅವರ ಕಾಯಕ.

ಸದ್ಯ ಇಲ್ಲಿ ಕಾಣುವ ಆ ಫೋಟೋ ನೋಡಿದ ಅವರ ಫ್ಯಾನ್ಸ್ ಗೆ ಸಖತ್ ಖುಷಿಯಾಗಿದೆ. ಇನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿರುವ ಸುದೀಪ್ ಏಪ್ರಿಲ್ 16 ಅಂತ ಮಾತ್ರ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಲ್ಲಿಗೆ ಏಪ್ರಿಲ್ 16ಕ್ಕೆ ಹೊಸದೇನೋ ಇದೆ ಅನ್ನೋ ಅರ್ಥ. ಫ್ಯಾನ್ಸ್ ಕೂಡ ತುಂಬಾನೆ ಎಕ್ಸೈಟ್ ಆಗಿದ್ದಾರೆ. ಸದ್ಯ ಹೊಸ ಸಿನಿಮಾಗಾಗಿ ಸುದೀಪ್ ಜಿಮ್ ನಲ್ಲಿ ಬೆವರು ಹರಿಸಿದ್ದಾರೆ. ಅವರ ಶೌಲ್ಡರ್ ನೋಡಿದವರಿಗೆ ಸಖತ್ ಗುರೂ ಅನಿಸುತ್ತೆ. ಅಷ್ಟೊಂದು ಖದರ್ ಆಗಿ ಸುದೀಪ್ ಕಾಣ್ತಾರೆ. ಬಾಡಿ ಬಿಲ್ಡ್ ಮಾಡಿದರೆ, ಇಷ್ಟೊಂದು ನೀಟ್ ಆಗಿ ಮಾಡಬೇಕು ಗುರೂ ಅಂತ ಅವರ ಫ್ಯಾನ್ಸ್ ಕಾಮೆಂಟ್ಸ್​ ಕೂಡ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ.

ಅದೇನೆ ಇರಲಿ, ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಏನಾದರೊಂದು ಫೋಟೋ ಅಥವಾ ಕ್ಯಾಪ್ಷನ್ ಕೊಡ್ತಾರೆ ಅಂದರೆ ಅದಕ್ಕೆ ಸಾಕಷ್ಟು ಅರ್ಥ ಇರುತ್ತೆ. ಅವರ ಮುಂದಿನ ಸಿನಿಮಾದ ಅಪ್ ಡೇಟ್ ಜೋರಾಗಿಯೇ ಇರುತ್ತೆ ಅನ್ನೋದಕ್ಕೆ ಇದೊಂದು ಝಲಕ್ ಸಾಕು. ಅದೇನೋ ಗೊತ್ತಿಲ್ಲ, ಏ.16ಕ್ಕೆ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಸೆಟ್ಟೇರುತ್ತೆ ಎಂಬ ಮಾತುಗಳಿವೆ. ಅವರು ತಮಿಳು ನಿರ್ದೇಶಕರ ಸಿನಿಮಾವೊಂದನ್ನೂ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕಾಗಿ ಈ ತಯಾರಿನಾ ಅಥವಾ ಬಿಲ್ಲ ರಂಗ ಬಾಷಾ ಸಿನಿಮಾಗೆ ತಯಾರಿನಾ ಅಂತ ಏ.16 ಬರುವವರೆಗೆ ಕಾಯಬೇಕು.

- Advertisement -

Latest Posts

Don't Miss