Sandalwood News: ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಹೀಗೆಂದಾಕ್ಷಣ, ಒಂದಷ್ಟು ಮಂದಿಗೆ ನಿಜಕ್ಕೂ ನಿವೇದಿತಾ ಕಣ್ಣಲ್ಲಿ ನೀರು ಬಂತಾ ಅನ್ನೋ ಪ್ರಶ್ನೆ ಕಾಡುತ್ತೆ. ಹೌದು, ಎಷ್ಟೇ ಆಗಲಿ ಹೆಣ್ಣಲ್ಲವೇ? ಹೆಣ್ಮಕ್ಕಳಿಗೆ ಬಹುಬೇಗ ಕಣ್ಣೀರು ಬರೋದು ಸಹಜ. ಕಣ್ಣೀರು ಹಾಕುವುದು ಅದೊಂದು ರೀತಿ ಹೆಣ್ಮಕ್ಕಳ ಹಕ್ಕು ಕೂಡ. ಹಕ್ಕು ಅನ್ನುವುದಕ್ಕಿಂತ ಅದು ಕಾಮನ್ ಎನ್ನಬಹುದು. ಇಷ್ಟಕ್ಕೂ ನಿವೇದಿತಾ ಗೌಡ ಕಣ್ಣಲ್ಲಿ ನೀರೇಕೆ? ಎಂಬ ಮತ್ತೊಂದು ಪ್ರಶ್ನೆಯೂ ಎದುರಾಗಬಹುದು. ಅದಕ್ಕೆ ಕಾರಣ ಇದುವರೆಗೆ ಅವರ ಲೈಫಲ್ಲಿ ನಡೆದಿರುವ ಕೆಲ ಘಟನೆಗಳು. ಆದಾಗ್ಯೂ ಅವರಿಂದು ಸ್ಟ್ರಾಂಗ್ ಆಗಿರೋಕೆ ಕಾರಣ ಅವರ ತಂದೆ. ಅದನ್ನು ನೆನಪಿಸಿಕೊಂಡಿರುವ ನಿವೇದಿತಾಗೆ ಕಣ್ಣೀರು ಬಂದಿದೆ.
ಹೆಣ್ಮಕ್ಕಳು ಟ್ರೋಲ್ ಆಗೋದು ಸಹಜ. ಅದರಲ್ಲೂ ಸೆಲಿಬ್ರಿಟಿಗಳ ಲೈಫಲ್ಲಿ ಕೊಂಚ ಏರುಪೇರಾದರೂ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗ್ತಾರೆ. ಅವರು ಆಡುವ ಮಾತು, ತೊಡುವ ಉಡುಗೆ, ನಡೆದುಕೊಳ್ಳುವ ರೀತಿ ಹೀಗೆ ಇನ್ನೂ ಅನೇಕ ವಿಷಯಗಳು ಟ್ರೋಲಿಗರಿಗೆ ಆಹಾರವಿದ್ದಂತೆ. ಇನ್ನು, ಸ್ವಲ್ಪ ಯಾಮಾರಿ ತಪ್ಪು ಮಾಡಿಬಿಟ್ಟರಂತೂ, ಟ್ರೋಲ್ ಗ್ಯಾರಂಟಿ. ಅದು ಎಷ್ಟರ ಮಟ್ಟಿಗೆ ಅಂದರೆ ಅವರು ಹಾಕಿರುವ ಪೋಸ್ಟ್ ಅಥವಾ ವಿಡಿಯೋ ಡಿಲೀಟ್ ಮಾಡೋವರೆಗೆ ಟ್ರೋಲ್ ಹಾವಳಿ ತಡಕ್ಕೊಳ್ಳಕಾಗಲ್ಲ. ಇನ್ನು ಕೆಲವು ಸೆಲಿಬ್ರಿಟಿಗಳು ತಮ್ಮ ಲೈಫಲ್ಲಿ ಮಾಡಿದ ಸಣ್ಣ ತಪ್ಪಿಂದ ಇಂತಹ ಕಿರಿಕಿರಿಗೆ ಒಳಗಾಗೋದು ಸಹಜ. ಅನೇಕ ಕಾಮಂಟ್ಸ್ ಗೆ ತುತ್ತಾಗಿಬಿಡುತ್ತಾರೆ.
ಅಂತಹ ಅದೆಷ್ಟೋ ಕಾಮೆಂಟ್ಸ್ ಮತ್ತು ಟ್ರೋಲ್ ಗಳಿಗೆ ಕೆಲವರು ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂಬಂತೆ ನೇರವಾಗಿ, ಖಡಕ್ ಆಗಿ ಉತ್ತರ ಕೊಡ್ತಾರೆ. ಕೆಲವರು ಕಾಮೆಂಟ್ಸ್ ಬಾಕ್ಸ್ ಬ್ಲಾಕ್ ಮಾಡ್ತಾರೆ. ಇನ್ನೂ ಕೆಲವರು ಯಾವುದಕ್ಕೂ ಉತ್ತರ ಕೊಡದೆ ಮೌನವಾಗುತ್ತಾರೆ. ಕೆಲವರು ಟ್ರೋಲರ್ಸ್ ಗಳ ಕಿರಿಕಿರಿಯಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ತಾರೆ. ಕೆಲವರು ತಾಳ್ಮೆಯಿಂದ ಆಚೆ ಬಂದು, ಯಾವುದಾದರೂ ವೇದಿಕೆ ಸಿಕ್ಕಾಗ, ಅಲ್ಲಿ ಎಲ್ಲವನ್ನೂ ಹೇಳಿಕೊಂಡು ಕಣ್ಣೀರು ಹಾಕುತ್ತಾರೆ. ಸದ್ಯ ನಿವೇದಿತಾ ಗೌಡ ಅಂಥದ್ದೊಂದು ವೇದಿಕೆ ಮೇಲೆ ಎಲ್ಲವನ್ನೂ ಹೇಳಿಕೊಂಡು, ಎದೆಭಾರ ಇಳಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಅವರ ಕಣ್ಣೀರು ಅನೇಕರನ್ನೂ ಭಾವುಕರನ್ನಾಗಿಸಿದೆ.
ಇಷ್ಟಕ್ಕೂ ನಿವೇದಿತಾಗೆ ಆಗಿದ್ದೇನು ಅನ್ನುವುದಾದರೆ, ಕಳೆದೊಂದು ವರ್ಷದಲ್ಲಿ ಚಂದನ್ ಶೆಟ್ಟಿ ಅವರಿಂದ ದೂರವಾದ ಬಳಿಕ ನಿವೇದಿತಾ ಗೌಡ ಇಲ್ಲಿಯವರೆಗೆ ಎಷ್ಟೊಂದು ಸಲ ಟ್ರೋಲ್ ಆಗಿದ್ದಾರೋ ಅವರಿಗೇ ಗೊತ್ತಿಲ್ಲ. ತುಂಡುಡುಗೆ ಮೂಲಕ ಸುದ್ದಿಯಾಗುವ ನಿವೇದಿತಾ ಆಗಾಗ ಟ್ರೋಲ್ ಆಗಿದ್ದುಂಟು. ಅನೇಕರು ಅವರಿಗೆ ಬುದ್ಧಿ ಹೇಳಿದ್ದೂ ಉಂಟು. ಅದಕ್ಕೆಲ್ಲ ನಿವೇದಿತಾ ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಅಷ್ಟೇ ಯಾಕೆ, ತುಂಬ ಅಸಹ್ಯದ ಪದ ಬಳಕೆ, ಅಶ್ಲೀಲ ಕಾಮೆಂಟ್ಸ್ ಬಂದರೂ ನಿವೇದಿತಾ ಅತ್ತ ಗಮನಿಸುತ್ತಿರಲಿಲ್ಲ. ಅನ್ನೋರು ಅಂದುಕೊಳ್ಳಲಿ, ಬರೆಯೋರು ಬರೆದುಕೊಳ್ಳಲಿ ಅಂತ ತಮ್ಮ ಪಾಡಿಗೆ ತಾವು ಮಾಡಿದ್ದೇ ಸರಿ ಅಂತ ಮಾಡುತ್ತಲೇ ಇದ್ದರು ಟ್ರೋಲ್ ಆಗುತ್ತಲೇ ಇದ್ದರು. ಎಲ್ಲೋ ಒಂದು ಕಡೆ ಅತಿಯಾಯ್ತು ಅಂದಾಗಷ್ಟೇ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲ ಕಾಮೆಂಟ್ಸ್ ಗೆ ತಿರುಗೇಟು ನೀಡಿದ್ದು ಬಿಟ್ಟರೆ, ಕೆಲವರ ಅಸಹ್ಯದ ಮಾತುಗಳು, ಚುಚ್ಚು ನುಡಿಗಳು ತಮ್ಮ ಮೇಲೆ ಬೀರಿರುವ ಪರಿಣಾಮ ಕುರಿತು ಮಾತಾಡಿರಲಿಲ್ಲ.
ಆದರೆ ನಿವೇದಿತಾ ಈಗ ಮೌನ ಮುರಿದು, ಮಾತಾಡಿದ್ದಾರೆ. ಕಣ್ಣೀರು ಹಾಕಿದ್ದಾರೆ. ತಮ್ಮ ಲೈಫಲ್ಲಿ ತಂದೆಯ ಬೆಂಬಲ, ಪ್ರೋತ್ಸಾಹ ಕುರಿತು ಹೇಳಿದ್ದಾರೆ. ತಮ್ಮ ಲೈಫಲ್ಲಿ ನಡೆದ ಕೆಲ ಘಟನೆ ಬಳಿಕ ನಾನು ಇಷ್ಟೊಂದು ಸ್ಟ್ರಾಂಗ್ ಆಗೋಕೆ ಕಾರಣ ತಂದೆ ಎಂದಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ. ನಾನು ನಿನ್ನ ಜೊತೆ ಇರುತ್ತೇನೆ ಎಂದು ತಂದೆ ಧೈರ್ಯ ತುಂಬಿದ್ದಾರೆ. ನನಗೆ ಅವರು ದೊಡ್ಡ ಶಕ್ತಿ ಅಂತ ನಿವೇದಿತಾ ಹೇಳಿದ್ದಲ್ಲದೆ, ಅವರಿಗೆ ನನ್ನಿಂದ ಕಷ್ಟ ಆಗುತ್ತಿದೆ ಅಂತಾನೂ ಕಣ್ಣೀರು ಹಾಕಿದ್ದಾರೆ.
ಅಂದಹಾಗೆ, ನಿವೇದಿತಾ ಗೌಡ ಅವರ ಈ ಮಾತುಗಳು ಅನೇಕರ ಕಣ್ಣುಗಳೂ ಒದ್ದೆಯಾಗಿವೆ. ಅನೇಕರು ಭಾವುಕರಾಗಿದ್ದಾರೆ. ಅದೇನೆ ಇರಲಿ, ನಿವೇದಿತಾ ಗೌಡ ತಮ್ಮ ವ್ಯೆಯಕ್ತಿಕ ಬದುಕು, ಡಿವೋರ್ಸ್ ಮತ್ತು ತಮಗೆ ಬರುವ ಅಶ್ಲೀಲ ಕಾಮೆಂಟ್‌ಗಳ ಬಗ್ಗೆ ಎಲ್ಲೂ ಮಾತಾಡಿಲ್ಲ. ಆದರೆ, ಎಲ್ಲವನ್ನೂ ಬದಿಗೊತ್ತಿ ಅವರು ಕಣ್ಣೀರು ಹಾಕಿದ್ದಾರೆ. ಅದೇನೆ ಇರಲಿ, ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಮೆಲ್ಲನೆ ಬ್ಯುಜಿ ಆಗುತ್ತಿದ್ದಾರೆ.
ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಮಿಕ್ಕಂತೆ ನಿವೇದಿತಾ ಗೌಡ ಅವರಿಗೆ ಬೇರೆ ಬೇರೆ ಭಾಷೆಯಲ್ಲಿ ಕೂಡ ಅವಕಾಶಗಳನ್ನು ಎದುರು ನೋಡುತ್ತಿರುವ ನಿವೇದಿತಾ ಗೌಡ ತೆಲುಗಿನಲ್ಲಿ ವಾಲು ಕಳ್ಳತಾ ಎಂಬ ಆಲ್ಬಂ ಹಾಡಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಮನಸಾರೆ ನಿನ್ನ ಹೆಸರಿನಲ್ಲಿ ಈ ಹಾಡು ಕನ್ನಡದಲ್ಲಿ ಕೂಡ ಬಿಡುಗಡೆಯಾಗಿತ್ತು. ನಿವೇದಿತಾ ಅತ್ತಿದ್ದಕ್ಕೆ ಹಲವರು ಟೀಕೆ ಮಾಡ್ತಾ ಇದ್ದಾರೆ. ಅದಕ್ಕೂ ಕಾಮೆಂಟ್ಸ್ ಬರುತ್ತಿವೆ. ಎಲ್ಲವನ್ನೂ ತಳ್ಳಿ ತಮ್ಮ ಪಾಡಿಗೆ ಕೆಲಸ ಮಾಡುವುದನ್ನು ಕಲಿತರೆ ಲೈಫು ಸುಲಭ ಅಂತಾನೂ ಹಲವರು ಹೇಳಿದ್ದಾರೆ. ನಿವೇದಿತಾ ಕಣ್ಣೀರಿಗೆ ಆ ಘಟನೆಗಳು, ತಂದೆಯ ಪ್ರೀತಿ, ಪ್ರೋತ್ಸಾಹ ಕೂಡ ಕಾರಣ ಅನ್ನೋದನ್ನು ಸ್ವತಃ ನಿವೇದಿತಾ ಹೇಳಿಕೊಂಡಿದ್ದಾರೆ.