Sandalwood News: ಅತ್ಯದ್ಭುತ ನಟ ತಬಲಾ ನಾಣಿ ಕರ್ನಾಟಕ ಟಿವಿ ಸಂಜರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ.
ತಬಲಾ ನಾಣಿ ಬಳಿ ಸಿನಿಮಾ ಕಥೆ ಆಯ್ಕೆ ಬಗ್ಗೆ ಕೇಳಿದಾಗ, ನಾನು ಪಾತ್ರ ಸಿಗುತ್ತದೆ ಎಂದು ಓಕೆ ಎನ್ನುವುದಿಲ್ಲ. ಬದಲಾಗಿ ಕಥೆ ಕೇಳಿ, ಓಕೆ ನನ್ನ ಪಾತ್ರ ಚೆನ್ನಾಗಿದೆ ಎಂದರೆ ಮಾತ್ರ ಪಾತ್ರ ಮಾಡಲು ನಿರ್ಧರಿಸುತ್ತೇನೆ. ನನ್ನನ್ನು ಬೈದುಕೊಂಡರೂ ಪರ್ವಾಗಿಲ್ಲ. ಹಾಗೆಲ್ಲ ಎಲ್ಲ ಕಥೆಯನ್ನೂ ನಾನು ಆಯ್ಕೆ ಮಾಡುವುದಿಲ್ಲವೆಂದು ತಬಲಾ ನಾಣಿ ಹೇಳಿದ್ದಾರೆ.
ಇನ್ನು ತಬಲಾ ನಾಣಿಯವರು ತುಂಬಾ ದುಬಾರಿನಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ನಾಣಿ. ಹಾಗೇನಿಲ್ಲ. ಸ್ಕ್ರಿಪ್ಟ್ ಚೆನ್ನಾಗಿದ್ದರೆ, ನಾನು ಕೆಲಸ ಮುಂದುವರಿಸುತ್ತೇನೆ. ಪೇಮೆಂಟ್ ದುಬಾರಿ ಏನಿಲ್ಲವೆಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಅಲ್ಲದೇ ಪೇಮೆಂಟ್‌ನಲ್ಲಿ ಹೆಚ್ಚು ಕಡಿಮೆಯಾದರೂ ಅಡ್ಡಿಲ್ಲ. ಕೊಡುವ ಗೌರವ ಸರಯಾಗಿರಬೇಕು. ಗೌರವ ನೀಡದಿದ್ದಲ್ಲಿ, ನಾನು ಆ ಸ್ಥಳದಲ್ಲಿ ಇರುವುದಿಲ್ಲ. ಈ ರೀತಿ ಸಿಚುಯೇಶನ್ ಬಂದಾಗ, ನಾನು ಡೈರೆಕ್ಟ್ ಆಗಿಯೇ ಕೇಳಿದ್ದೆ. ನಾನು ಇನ್ನೂ ತಬಲಾ ಮಾರಿಲ್ಲ, ನಾನು ಇರಬೇಕಾ..? ಬೇಡ್ವಾ..? ತಬಲಾ ಬಾರಿಸಿಯೇ ಸಣ್ಣ ಮನೆ ಕಟ್ಟಿದ್ದೀನಿ. ಗೌರವಕ್ಕಿಂತ ಮುಖ್ಯ ನನಗೇನಿಲ್ಲವೆಂದು ತಬಲಾ ನಾಣಿ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

