Movie News: ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿವೆ. ಇದು ಎಲ್ಲರಿಗೂ ಗೊತ್ತು. ಹಾಗಾಗಿ ನಟ, ನಟಿಯರೂ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗುತ್ತಿದ್ದಾರೆ. ಅದರಲ್ಲೂ ಸೌತ್ ಇಂಡಿಯಾದ ಸ್ಟಾರ್ ನಟ,ನಟಿಯರಂತೂ ಈಗ ಬಾಲಿವುಂಡ್ ಅಂಗಳದಲ್ಲಿ ಸಖತ್ ಮಿಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಗೆ ಕನ್ನಡದ ಅನೇಕ ನಟ, ನಟಿಯರು ಹೋಗಿದ್ದಾರೆ.
ಬರೀ ನಟ, ನಟಿಯರು ಮಾತ್ರವಲ್ಲ, ಟೆಕ್ನೀಷಿಯನ್ಸ್ ಕೂಡ ಬಾಲಿವುಡ್ ಸ್ಪರ್ಶಿಸಿದ್ದಾಗಿದೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡ ನಟಿ ರಶ್ಮಿಕಾ ಮಂದಣ್ಣ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅವರ ಸಾಲಿಗೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲಾ ಕೂಡ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
ಹೌದು, ಶ್ರೀಲೀಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡು ಇಲ್ಲಿಂದ ಟಾಲಿವುಡ್ ಗೆ ಜಿಗಿದಿದ್ದರು. ಅಲ್ಲಿಂದ ಈಗ ಬಾಲಿವುಡ್ ಅಂಗಳಕ್ಕೂ ಹಾರಿದ್ದಾರೆ. ಕನ್ನಡ ನಟಿಗೆ ಈ ಪರಿಯ ಅವಕಾಶ ಸಿಕ್ಕಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗಕ್ಕೆ ಖುಷಿ. ಇಷ್ಟಕ್ಕೂ ಶ್ರೀಲೀಲಾ ಅವರಿಗೆ ನಿಜಕ್ಕೂ ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆಯಾ? ಸಿಕ್ಕಿದ್ದರೆ ಯಾವ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಕೂಡ ಎದುರಾಗಬಹುದು. ಇದಕ್ಕೆ ಸ್ವತಃ ಶ್ರೀಲೀಲಾ ಅವರೇ ಸ್ಪಷ್ಟಪಡಿಸಿದ್ದಾರೆ.
ಸದ್ಯ ಕನ್ನಡ ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಬೇಡಿಕೆ ನಟಿಯರಲ್ಲಿ ಅವರೂ ಒಬ್ರರು. ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದ ಶ್ರೀಲೀಲಾ, ಹಿಂದಿ ಸಿನಿಮಾದಲ್ಲಿ ಕೆಲಸ ಮಾಡು ವಿಷಯ ನಿಜ ಎಂದು ಒಪ್ಪಿಕೊಂಡಿದ್ದಾರೆ. ತೆಲುಗು ನಟ ರಾಣಾ ದಗ್ಗುಬಾಟಿ ಶೋಗೆ ಶ್ರೀಲೀಲಾ ಗೆಸ್ಟ್ ಆಗಿ ಹೋಗಿದ್ದರು. ಈ ಕುರಿತಾದ ಪ್ರೋಮೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಲ್ಲಿ ಮೊದಲ ಸಲ ಹೆಜ್ಜೆ ಇಟ್ಟಿರುವ ಬಗ್ಗೆ ರಾಣಾ ಅವರು ಶ್ರೀಲೀಲಾ ಅವರನ್ನು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಿದ ಶ್ರೀಲೀಲಾ, ಬಾಲಿವುಡ್‌ಗೆ (Bollywood) ಎಂಟ್ರಿ ಕೊಡುತ್ತಿರುವ ವಿಷಯ ನಿಜ. ಬಾಲಿವುಡ್‌ನಲ್ಲಿ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಹೊಸತನದ ಕಥೆ, ಅದೊಂದು ಹೊಸ ಅನುಭವ ಮತ್ತು ವಿಭಿನ್ನ ಎಂದಷ್ಟೇ ಹೇಳಿದ್ದಾರೆ ಶ್ರೀಲೀಲಾ.
ಆದರೆ ಶ್ರೀಲೀಲಾ ನಟಿಸುತ್ತಿರುವ ಸಿನಿಮಾ ಯಾವುದು, ಅವರಿಗೆ ಹೀರೋ ಯಾರು, ಯಾರು ನಿರ್ದೇಶನ ಮಾಡ್ತಾರೆ ಎಂಬ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಸದ್ಯ ಹಿಂದಿ ಸಿನಿಮಾದಲ್ಲಿ ನಟಿಸೋದು ಪಕ್ಕಾ ಎಂಬುದನ್ನಷ್ಟೇ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಇದರ ಎಪಿಸೋಡ್ ಸೆ.30ರಂದು ಒಟಿಟಿಯಲ್ಲಿ ಪ್ರಸಾರವಾಗಿದೆ.
ಅದೇನೆ ಇರಲಿ, ಈ ಹಿಂದೆ ಶ್ರೀಲೀಲಾ ಅವರ ಬಾಲಿವುಡ್ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಎಲ್ಲೂ ಅಧಿಕೃತವಾಗಿ ಅವರು ಬಾಲಿವುಡ್ ಅಂಗಳಕ್ಕೆ ಜಿಗಿಯುತ್ತಾರೋ ಇಲ್ಲವೋ ಅನ್ನೋದು ಗೊತ್ತಿರಲಿಲ್ಲ. ಸದ್ಯ ಶ್ರೀಲೀಲಾ ಅವರೇ ಸ್ವತಃ ಬಾಲಿವುಡ್ ಗೆ ಹೋಗುವ ವಿಷಯವನ್ನು ಹೇಳಿಕೊಂಡಿದ್ದಾರೆ. ಅಂದಹಾಗೆ, ಶ್ರೀಲೀಲಾ ಡಿ.5ರಂದು ತೆರೆಗೆ ಅಪ್ಪಳಿಸುತ್ತಿರುವ ‘ಪುಷ್ಪ 2’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಹೀರೋ ಅಲ್ಲು ಅರ್ಜುನ್ ಜೊತೆ ‘ಕಿಸ್ಸಿಕ್’ ಎಂಬ ಸಖತ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಹದಿನೈದು ದಿನಗಳ ಬಳಿಕ ಶ್ರೀಲೀಲಾ ಅಭಿನಯಿಸಿರುವ ‘ರಾಬಿನ್‌ಹುಡ್’ ಚಿತ್ರ ಕೂಡ ರಿಲೀಸ್ ಆಗಲಿದೆ.
ವಿಜಯ್ ಭರಮಸಾಗರ, ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ