Sandalwood News: ಸ್ಯಾಂಂಡಲ್‌ವುಡ್‌ನಲ್ಲಿ ಪ್ರಸಿದ್ಧ, 90ರ ದಶಕದವರಿಗೆ ಸಾಕಷ್ಟು ಮೆಲೋಡಿ ಸಂಗೀತ, ಸಿನಿಮಾವನ್ನು ನೀಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಾಪಕರಾಗಿದ್ದವರು. ಅವರಲ್ಲಿ ಕಥೆ ಬರಿಯುವ ಹವ್ಯಾಸವಿದ್ದು, ಇದೇ ಹವ್ಯಾಸ ಅವರನ್ನು ಸಿನಿಮಾ ಲೋಕಕ್ಕೆ ಕರೆತಂದಿತು. ನಾನು ಅಧ್ಯಾಪಕನ ಕೆಲಸ ಬಿಟ್ಟು ಬೇರೆ ಎಲ್ಲೇ ಕೆಲಸಕ್ಕೆ ಹೋದರೂ, ಅಲ್ಲಿ ನನ್ನದೊಂದು ಸ್ಟ್ಯಾಂಪ್ ಇರಬೇಕು ಅನ್ನೋದು ನಾಗತೀಹಳ್ಳಿ ಆಸೆ. ಹಾಗಾಗಿ ಅವರು ಸಿನಿಮಾ ಇಂಡಸ್ಟ್ರಿಗೆ ಬಂದು ನಿರ್ದೇಶನಕ್ಕೆ ಇಳಿದಿದ್ದು. ಹೇಳಿದಂತೆ, ಅತ್ಯದ್ಭುತ ಸಿನಿಮಾ ನೀಡಿ, ತಮ್ಮದೇ ಆದ ಛಾಪನ್ನೂ ಮೂಡಿಸಿದ್ದಾರೆ. ಆದರೆ ಇದರ ಹಿಂದೆ ಹಲವು ವರ್ಷಗಳ ಪ್ರಯತ್ನ, ಪರಿಶ್ರಮ, ಕಷ್ಟ ಎಲ್ಲವೂ ಇದೆ.
ನಾಗತೀಹಳ್ಳಿ ಚೆನ್ನಾಗಿ ಕಥೆ ಕವನ ಬರೆಯುತ್ತಿದ್ದು, ಅವರು ಅಧ್ಯಾಪಕರಾಗಿದ್ದರು. ಆಗ ಅವರಿಗೆ ಸಿನಿ ಇಂಡಸ್ಟ್ರಿಯಿಂದ ಅವಕಾಶದ ಕರೆ ಬಂದಿತ್ತು. ಈ ವೇಳೆ ನೀನು ಚೆನ್ನಾಗಿ ಕಥೆ, ಕವನ ಬರೆಯುತ್ತಿಯಾ. ಆದರೆ ಸಿನಿಮಾ ಕ್ಷೇತ್ರಕ್ಕೆ ಹೋಗಬೇಡ. ಹಾಳಾಗುತ್ತಿಯಾ ಅಂತಾ ಸ್ವತಃ ನಾಗತೀಹಳ್ಳಿಯ ಹಿತೈಶಿಗಳೇ ಹೇಳಿದ್ದರಂತೆ. ಆದರೆ ಅಂಥ ಮಾತಿಗೇ ಅದೇ ರೀತಿ ಉತ್ತರಿಸಿದ್ದ ಚಂದ್ರಶೇಖರ್, ನನಗೆ ಹಾಳಾಗಬೇಕು. ಈ ರೀತಿಯ ಮಡಿವಂತಿಕೆ ನನಗಿಷ್ಟವಿಲ್ಲ ಎಂದು ಸಿನಿಮಾ ಕ್ಷೇತ್ರಕ್ಕೆ ಬರಲು ನಿರ್ಧರಿಸಿದರು.
ಆಗಿನ ಕಾಲದಲ್ಲಿ ಸಿನಿ ಕ್ಷೇತ್ರದಲ್ಲಿ ಹೆಸರು ಮಾಡೋದು ತುಂಬಾ ಕಷ್ಟವಾಗಿತ್ತು. ಸೋಶಿಯಲ್ ಮೀಡಿಯಾದಂಥ ಪ್ರಚಾರದ ಸಹಾವಿಲ್ಲದೇ, ಸಿನಿಮಾ ಗೆಲ್ಲಿಸುವುದು ಸಾಹಸದ ಕೆಲಸವೇ ಆಗಿತ್ತು. ಇಂಥ ಸ್ಥಿತಿಯಲ್ಲೂ ಚಂದ್ರಶೇಖರ್ ಸಿನಿಮಾ ಗೆಲ್ಲುತ್ತಿತ್ತು. ಇದರ ಸಿಕ್ರೇಟ್ ಏನು ಅನ್ನೋದನ್ನು ತಿಳಿಯಲು ಸಂಪೂರ್ಣ ಸಂದರ್ಶನ ನೋಡಿ.

