Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿದ್ದ ದರ್ಶನ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ.
ದರ್ಶನ್ ಗ್ಯಾಂಗ್‌ನಲ್ಲಿ ಕೆಲವರಿಗೆ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಅನಾರೋಗ್ಯ ನಿಮಿತ್ತ ಆಪರೇಷನ್ ಮಾಡಿಸಿಕೊಳ್ಳಲಷ್ಟೇ ದರ್ಶನ್ ಜಾಮೀನು ಪಡೆದಿದ್ದರು. ಇದೀಗ ಷರತ್ತು ಬದ್ಧ ಜಾಮೀನು ಸಿಕ್ಕಿದ್ದು, ದರ್ಶನ್ ನಿಟ್ಟುಸಿರು ಬಿಟ್ಟಿದ್ದಾರೆ.
ಪವಿತ್ರಾ ಗೌಡ 5ರಿಂದ 6 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಯಾವಾಗ ಜೈಲಿನಿಂದ ಬಿಗ್ ರಿಲೀಫ್ ಸಿಗುತ್ತದೆಯೋ ಎಂಬ ಟೆನ್ಶನ್‌ನಲ್ಲಿ ಇದ್ದರು. ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಕೂಡ, ಇದುವರೆಗೂ ಜಾಮೀನು ಮಂಜೂರಾಗಿರಲಿಲ್ಲ. ಇದೀಗ ಜಾಮೀನು ಮಂಜೂರಾಗಿದ್ದು, ಸೋಮವಾರದ ದಿನ ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್, ಪಿಕ್ ಕಳುಹಿಸುತ್ತಿದ್ದ ಎಂದು, ದರ್ಶನ್ ಸಹಚರ ದರ್ಶನ್‌ಗೆ ಮಾಹಿತಿ ನೀಡಿದ್ದ. ಹೀಗಾಗಿ ದರ್ಶನ್ ಅವರ ಅಭಿಮಾನಿ ಸಂಘದ ಅಧ್ಯಕ್ಷನ ಮೂಲಕ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕಿಡ್ನ್ಯಾಪ್ ಮಾಡಿ, ಕರೆ ತರಿಸಿದ್ದ. ಬಳಿಕ ಶೆಡ್‌ನಲ್ಲಿ ಎಲ್ಲರೂ ಸೇರಿ, ಚೆನ್ನಾಗಿ ಹೊಡೆದು ಚಿತ್ರಹಂಸೆ ಕೊಟ್ಟು, ಕೊಲೆ ಮಾಡಿದ್ದರು.
ಕೊಲೆ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತನ್ನ ಮೂವರು ಅಭಿಮಾನಿಗಳನ್ನು ಕರೆಸಿದ್ದ ದರ್ಶನ್, ಅವರಿಗೆ ಇಂತಿಷ್ಟು ದುಡ್ಡು ಕೊಡುವುದಾಗಿ ತಿಳಿಸಿ, ಶವ ಸಾಗಿಸಿ, ತಾವೇ ಬಂಧಿಯಾಗುವಂತೆ ಹೇಳಿದ್ದ. ಬಳಿಕ ಮರುದಿನವೇ ಮೈಸೂರಿನಲ್ಲಿ ಶೂಟಿಂಗ್‌ಗೆ ತೆರಳಿದ್ದ. ಆದರೆ ತನಿಖೆ ಆರಂಭಿಸಿದ ಪೊಲೀಸರು, ಈ ಕೊಲೆ ಕೇಸ್ ಹಿಂದೆ ದರ್ಶನ್ ಇರುವುದನ್ನು ಪತ್ತೆ ಮಾಡಿ, ಸ್ಪಾಟ್‌ನಲ್ಲೇ ಬಂಧಿಸಿದರು.
ದರ್ಶನ್ ಜೊತೆಗೆ ಪವಿತ್ರಾ ಗೌಡ ಸೇರಿ, ಕೊಲೆಯಲ್ಲಿ ಭಾಗಿಯಾದ 13 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಪವಿತ್ರಾ ಗೌಡಳ ಸಂಗ ಬಿಟ್ಟಿರುವುದಾಗಿ ದರ್ಶನ್ ಮನವರಿಕೆ ಮಾಡಿಕೊಟ್ಟ ಬಳಿಕ, ಪತ್ನಿ ವಿಜಯಲಕ್ಷ್ಮೀ ದರ್ಶನ್ ನೋಡಲು ಬಂದು, ದರ್ಶನ್ ಬಿಡುಗಡೆಗೆ ಜಾಮೀನು ಕೊಡಿಸುವುದರಿಂದ ಹಿಡಿದು ಪೂಜೆ ಪುನಸ್ಕಾರ ಮಾಡುವುದರವರೆಗೆ ದರ್ಶನ್ ಜೊತೆ ನಿಂತಿದ್ದರು. ಇದೀಗ ದರ್ಶನ್ ಗ್ಯಾಂಗ್‌ಗೆ ರೆಗ್ಯೂಲರ್ ಬೇಲ್ ಸಿಕ್ಕಿದೆ.