Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಾವ ರೇಂಜ್‌ಗೆ ಸದ್ದು ಮಾಡಿದೆ ಅಂದ್ರೆ, ಭಾರತ ಬಿಟ್ಟು ಬೇರೆ ದೇಶಗಳಿಗೆ, ಈ ಸಿನಿಮಾದಲ್ಲಿ ಅಭಿನಯಿಸಿದ ಸಣ್ಣ ಪುಟ್ಟ ಕಲಾವಿದರು ಹೋದರೂ ಕೂಡ, ಗುರುತಿಸಲ್ಪಡುತ್ತಿದ್ದಾರೆ. ಆ ಮಟ್ಟಿಗೆ ಕೆಜಿಎಫ್ ಸಿನಿಮಾ ಸದ್ದು ಮಾಡುತ್ತಿದೆ.
ಇನ್ನು ಯಶ್ ಬಗ್ಗೆ ಹೇಳೋದೇ ಬೇಡಾ. ಅವರೆಲ್ಲಿ ಹೋದರೂ, ಜನ ಅವರನ್ನು ರಾಕಿ ಭಾಯ್ ಅಂತಲೇ ಗುರುತಿಸುತ್ತಾರೆ. ಆ ರೇಂಜಿಗಿದೆ ಅವರ ಹವಾ. ಹೀಗಿರುವಾಗ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದು, ಯಶ್ ಕುಟುಂಬ ಮುಂಬೈನಲ್ಲಿ ಸದ್ಯಕ್ಕೆ ಉಳಿದುಕೊಂಡಿದೆ.
ಹೀಗಾಗಿ ಶೂಟಿಂಗ್‌ನಿಂದ ಸ್ವಲ್ಪ ಬಿಡುಗಡೆ ಸಿಕ್ಕಿತೆಂದು, ರಾಧಿಕಾ, ಐರಾ ಮತ್ತು ಮಗನೊಂದಿಗೆ ಯಶ್ ಮುಂಬೈ ಸುತ್ತಾಟ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಮುಗಿಬಿದ್ದು, ಯಶ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಓರ್ವ ಅಭಿಮಾನಿ ಕಾಲಿಗೆ ಬೀಳಲು ರೆಡಿಯಾಗಿದ್ದ. ಆದರೆ ಯಶ್ ಅದಕ್ಕೆ ಅವಕಾಶ ಮಾಡಿಕೊಡದೇ, ದೂರ ಸರಿಯಿರಿ, ಕಾಲಿಗೆಲ್ಲ ಬೀಳಬೇಡಿ ಎಂದು ಕೈ ಸನ್ನೆ ಮಾಡಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ನಿಂತು ತಾಳ್ಮೆಯಿಂದ ಫೋಟೋಗೆ ಪೋಸ್ ನೀಡಿದ್ದಾರೆ.