Tuesday, October 28, 2025

Latest Posts

Sandalwood News: ಅವಮಾನಗಳು ಹಲವು! ಯಾರೂ ಹೇಳಲ್ಲ ಕೇಳಲ್ಲ: Dayal Padmanabhan Podcast

- Advertisement -

Sandalwood News: ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ಅಲ್ಲಿ ತಮಗಾಗಿರುವ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಸಿನಿಮಾ ಇಂಡಸ್ಟ್‌ರಿಯಲ್ಲಿ ತಮಗಾಗಿರುವ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಹೊಸತರಲ್ಲಿ ದಯಾಳ್‌ಗೆ ಭಾಷೆಯ ಬಗ್ಗೆ ಅವಮಾನಿಸಲಾಗಿತ್ತಂತೆ. ನೀವು ತಮಿಳಿಗರು ನಿಮಗ್ಯಾಕೇ ಇಲ್ಲಿ ಚಾನ್ಸ್ ನೀಡಬೇಕು ಎಂದೆಲ್ಲ ಪ್ರಶ್ನಿಸಿದ್ದರಂತೆ. ಏಕೆಂದರೆ ದಯಾಳ್ ಅವರು ತಮಿಳಿನಲ್ಲಿ ಕಥೆ, ಹಾಡುಗಳನ್ನು ಬರೆಯುತ್ತಿದ್ದರು. ಆದರೆ ದಯಾಳ್ ಅವರು ಆ ಅವಮಾನಗಳನ್ನೆಲ್ಲ ಎದುರಿಸಿ, ತಮ್ಮ ತಪ್ಪುಗಳನ್ನು ತಿದ್ದಿಕೊಂಡು, ಸಕ್ಸಸ್ ಆಗಿದ್ದಾರೆ.

ಇನ್ನು ಸಿನಿಮಾ ಮಾಡೋದು ಕಷ್ಟಾನಾ..? ಸುಲಭಾನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ದಯಾಳ್ ಅವರು, ನಾವು ನಮ್ಮ ಕೆಲಸವನ್ನು ಪ್ರೀತಿಸಿದರೆ, ಆ ಕೆಲಸ ಸುಲಭವಾಗುತ್ತದೆ. ಮತ್ತು ಅದರಲ್ಲಿ ನಮಗೆ ಸಕ್ಸಸ್ ಸಿಗುತ್ತದೆ. ಅದೇ ರೀತಿ ಸಿನಿಮಾ ಕೂಡ ಅದನ್ನು ಪ್ರೊಫೆಶನಲ್ ಆಗಿ, ಪ್ರೀತಿಯಿಂದ ತಯಾರು ಮಾಡಿದರೆ, ಅದು ಸಹ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದಿದ್ದಾರೆ.

ಇನ್ನು ಸಿನಿಮಾ ಮಾಡುವವರ ಬಗ್ಗೆ ಟಿಪ್ಸ್ ನೀಡಿರುವ ದಯಾಳ್. ಸಿನಿಮಾ ಮಾಡಿ ಲಾಭವಾದ್ರೆ, ಇನ್ವೆಸ್ಟ್ ಮಾಡಲು ಹಲವು ದಾರಿಗಳಿದೆ. ಆದರೆ, ನಷ್ಟವಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇರಬೇಕು ಅಂತಾರೆ ದಯಾಳ್. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss