Sandalwood News: ಹಲವು ಸಿನಿಮಾಗಳಲ್ಲಿ ನಟಿಸಿ, ಬಿಗ್‌ಬಾಸ್‌ಗೆ ಹೋಗಿ, ಬಳಿಕ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿರುವ ಆಲ್ ರೌಂಡರ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅನಿತಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ಅದು ಬಳೆ ಪೇಟೆ ಸಿನಿಮಾ. ಬಳಿಕ ಅನಿತಾ ಬಿಗ್‌ಬಾಸ್‌ಗೆ ಹೋದರು. ಅಲ್ಲಿಯವರೆಗೆ ಅನಿತಾ ಭಟ್‌ಗೆ ಒಬ್ಬಳು ಮಗಳಿದ್ದಾಳೆ ಅನ್ನೋದು ಯಾರಿಗೂ ತಿಳಿದಿರಲಿಲ್ಲ. ಆದರೆ ಬಿಗ್‌ಬಾಸ್ ಅಂದ್ರೇನು ಅಂತಾನೇ ಗೊತ್ತಿರದೇ ಅನಿತಾ ಅಲ್ಲಿ, ತನ್ನ ಜೀವನದ ಹಲವು ಸತ್ಯಗಳನ್ನು ಹೇಳಿದ್ದರು. ಬಳಿಕ ಬಿಗ್‌ಬಾಸ್‌ನಿಂದ ಆಚೆ ಬಂದಾಗಲೇ ಅವರಿಗೆ, ನಾನು ಹೇಳಿದ ಹಲವು ಸತ್ಯಗಳು ಜನರಿಗೆ ಗೊತ್ತಾಗಿದೆ ಅನ್ನೋ ಅರಿವಾಗಿದ್ದು.
ಆಗ ಅನಿತಾ ಅವರಿಗೆ ಸರಿಯಾಗಿರುವ ಹೆಣ್ಣು ಮಕ್ಕಳಿಗೆ ಇಂಡಸ್ಟ್ರಿಯಲ್ಲಿ ಅವಕಾಶ ಸಿಗೋದು ಕಡಿಮೆ. ಅಂಥದ್ರಲ್ಲಿ ಓರ್ವ ಮಗಳಿದ್ದಾಳೆ ಅಂದಾಗ, ಜನ ನನ್ನನ್ನು ಅದ್ಹೇಗೆ ಎಕ್ಸೆಪ್ಟ್ ಮಾಡ್ತಾರೆ..? ಮುಂದೆ ಅವಕಾಶಗಳು ಸಿಗತ್ತೋ, ಇಲ್ಲವೋ..? ಜೀವನ ಹೇಗೋ ಅನ್ನೋ ಭಯ ಕಾಡಿತ್ತು. ಆದರೆ ಬಿಗ್‌ಬಾಸ್‌ಗೆ ಹೋಗಿ ಬಂದ ಬಳಿಕ, ಅವರಿಗೆ ಹಲವು ಅವಕಾಶಗಳು ಹುಡುಕಕೊಂಡು ಬಂತು. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

